ಕ್ರೀಡೆ

ತನ್ನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದ 18 ವರ್ಷದ ಯುವತಿಯನ್ನೇ ಮದುವೆಯಾದ ಭಾರತದ ಆಟಗಾರ !

Pinterest LinkedIn Tumblr

ನವದೆಹಲಿ: ಭಾರತದ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ತಮ್ಮ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದ 18 ವರ್ಷದ ಯುವತಿಯನ್ನೇ ವಿವಾಹವಾಗಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಕಳೆದ ಮಾರ್ಚ್ ನಲ್ಲಿ ಪಶ್ಚಿಮ ಬಂಗಾಳದ ಬರಾಸತ್ ಠಾಣೆಯಲ್ಲಿ ಯುವತಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ ದೂರು ದಾಖಲಿಸಿದ್ದಳು. ಆ ವೇಳೆ ಜರ್ಮನಿಯ ಲೀಗ್ ನಲ್ಲಿ ಆಡುತ್ತಿದ್ದ ಸೌಮ್ಯಜಿತ್ ರನ್ನು ಏಷ್ಯನ್ ಗೇಮ್ಸ್ ತಂಡದಿಂದ ಕೈ ಬಿಡಲಾಗಿತ್ತು. ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಿಂದ ಅಮಾನುತುಗೊಳಿಸಲಾಗಿತ್ತು.

ಬಂಧನ ಭೀತಿಯಿಂದ ಯುರೋಪ್ ನಲ್ಲೇ ಉಳಿದಿದ್ದ ಸೌಮ್ಯಜಿತ್ ಕಳೆದ ಶುಕ್ರವಾರ ಕೋಲ್ಕತ್ತಾಕ್ಕೆ ಆಗಮಿಸಿ ಯುವತಿಯೊಂದಿಗೆ ಮದುವೆಯಾಗಿದ್ದಾರೆ.

Comments are closed.