ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಡುಸೋಗೆ ಒಂದು ಪೊದರು ಗಿಡ. ವಾಸಾ, ಸಿಂಹಾಸ್ಯ, ಭೀಷಮ್ಗ್ಮಾತಾ ಮುಂತಾದ ಹೆಸರುಗಳಿರುವ ಆಡುಸೋಗೆಯು ದಮ್ಮು, ಕೆಮ್ಮು, ಗಂಟಲೂರಿ, ಕಜ್ಜಿ, ತೂರಿ, ಇಸಬು ರಕ್ತಸ್ರಾವಗಳಿಗೆ ಸಿದ್ಧಔಷಧ.
ಆಡುಸೋಗೆ ಸೊಪ್ಪಿನ ಲೇಹ್ಯ ಮಾಡುವ ವಿಧಾನ:
ಬೇಕಾಗುವ ಸಾಮಗ್ರಿಗಳು
ಆಡುಸೋಗೆ ಸೊಪ್ಪಿನ ರಸ: 1 ಭಾಗ
ತುಪ್ಪ: ಕಾಲು ಭಾಗ
ಸಕ್ಕರೆ: ಅರ್ಧ ಭಾಗ
ಜೇನುತುಪ್ಪ: ಅರ್ಧ ಭಾಗ
ಹಿಪ್ಪಲಿ ಪುಡಿ: 1 /8 ಭಾಗ
ಮಾಡುವ ವಿಧಾನ:
– ಆಡುಸೋಗೆ ಸೊಪ್ಪಿನ ರಸಕ್ಕೆ ಸಕ್ಕರೆ ಸೇರಿಸಿ ಕರಗಿಸಬೇಕು.
– ಅನಂತರ ಒಲೆಯ ಮೇಲಿಟ್ಟು ನಿಧಾನವಾಗಿ ಕುದಿಸಬೇಕು.
-ನೀರಿನ ಅಂಶ ಕಡಿಮೆಯಾಗಿ ಎಳೆ ಎಳೆಯಾಗಿ ಪಾಕ ಬಂದಾಗ ಹಿಪ್ಪಲಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
– ಅನಂತರ ಒಲೆಯಿಂದ ಕೆಳಗಿಳಿಸಿ ತುಪ್ಪವನ್ನು ಸೇರಿಸಿ ಕಲೆಸಬೇಕು.
-ಪಾಕವು ಆರುತ್ತಾ ಬಂದು ಸ್ವಲ್ಪ ಬಿಸಿಯಿರುವಾಗ, ಜೇನುತುಪ್ಪ ಸೇರಿಸಿ ಮಿಶ್ರ ಮಾಡಿ ಶುದ್ಧವಾದ ಬಾಟಲಿ ಅಥವಾ ಬಾಟಲಿಗೆ ಹಾಕಿ ತುಂಬಿಟ್ಟುಕೊಳ್ಳಬೇಕು.
ಸೇವಿಸುವ ಕ್ರಮ:
ದೊಡ್ಡವರಿಗೆ : ಆಹಾರಕ್ಕೆ ಮೊದಲು ದಿವಸಕ್ಕೆ ಮೂರು ಬಾರಿ ಒಂದರಿಂದ ಮೂರು ಚಮಚ
ಮಕ್ಕಳಿಗೆ: ಆಹಾರಕ್ಕೆ ನಂತರ ದಿವಸಕ್ಕೆ ಮೂರು ಬಾರಿ ಅರ್ಧ ಚಮಚ
ಉಪಯೋಗ: ಕೆಮ್ಮು, ದಮ್ಮು, ಕಫ, ಅಜೀರ್ಣ, ಬಾಯಿರುಚಿ ಇಲ್ಲದಿರುವುದು, ರಕ್ತಸ್ರಾವ ಮುಂತಾದ ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿ.

Comments are closed.