ರಾಷ್ಟ್ರೀಯ

ಹೈದರಾಬಾದ್ ಯುವತಿ ಕುವೈತ್‌ಗೆ ಕಳ್ಳಸಾಗಣೆ: ಸುಷ್ಮಾ ನೆರವು ಕೋರಿದ ತಾಯಿ

Pinterest LinkedIn Tumblr


ಹೈದರಾಬಾದ್: ನಗರದ 18 ವರ್ಷದ ಹುಡುಗಿಯನ್ನು ಕುವೈತ್‌ಗೆ ಕಳ್ಳ ಸಾಗಣೆ ಮಾಡಲಾಗಿದ್ದು, ಅವಳಿಗೆ ತೀವ್ರ ಹಿಂಸೆ ಕೊಡಲಾಗ್ತಿದ್ದು, ಜನರಿಲ್ಲದ ಸ್ಥಳದಲ್ಲಿ ಅವಳನ್ನು ಕೂಡಿಹಾಕಲಾಗಿದೆ. ಅವಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋದ ಬಾಸ್, ಹಿಂಸೆ ಕೊಡುತ್ತಿದ್ದು ಸರಿಯಾಗಿ ಊಟ ವಸತಿ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಯುವತಿಯ ತಾಯಿ ರುಕಿಯಾ ಬೇಗಂ ಅವಲತ್ತುಕೊಂಡಿದ್ದಾರೆ.

ತನ್ನ ಕುಟುಂಬದವರೊಡನೆ ತನ್ನ ಮಗಳ ಸ್ಥಿತಿಯ ಬಗ್ಗೆ ದೂರವಾಣಿಯಲ್ಲಿ ತಿಳಿಸಿರುವ ತಾಯಿ, ವಿದೇಶಾಂಗ ಸಚಿವೆ ಸ್ವರಾಜ್ ನೆರವನ್ನೂ ಸಹ ಕೋರಿದ್ದಾರೆ. ಮಲನ್ ಬೇಗಂಳನ್ನು ಕಾಪಾಡುವಂತೆಯೂ ರುಕಿಯಾ ಬೇಗಂ ಪತ್ರದ ಮೂಲಕ ಕೇಳಿಕೊಂಡಿದ್ದಾರೆ. ಹಫೀಜ್ ಬಾಬಾ ನಗರದಲ್ಲಿ ವಾಸಿಸುತ್ತಿರುವ ರುಕಿಯಾ, ತಸ್ಲೀಂ ಬೇಗಂ ಹಾಗೂ ಆಕೆಯ ಪತಿ ನವಾಜ್ ಎಂಬ ಶಾಲಿಬಂದಾದ ನಿವಾಸಿಗಳು ತನ್ನ ಮಗಳಿಗೆ ಕುವೈತ್‌ನಲ್ಲಿ ಬ್ಯೂಟಿಷಿಯನ್ ಉದ್ಯೋಗ ಕೊಡಿಸುವುದಾಗಿ ಹೇಳಿದ್ದರು. ಜತೆಗೆ, ತಿಂಗಳಿಗೆ 100 ಕುವೈತಿ ದಿರ್ಹಾಮ್ಸ್ ಅಥವಾ 22 ಸಾವಿರ ರೂ. ಸಂಬಳ ಕೊಡಿಸುವುದಾಗಿಯೂ ಭರವಸೆ ನೀಡಿದ್ದರು.

ಅಲ್ಲದೆ, ಪಾಸ್‌ಪೋರ್ಟ್‌ ಅನ್ನೂ ತನ್ನ ಮಗಳಿಗೆ ಅವರೇ ಮಾಡಿಸಿಕೊಟ್ಟಿದ್ದರು. ಜತೆಗೆ, ತನ್ನ ಮಗಳ ವಯಸ್ಸು 18 ಆಗಿದ್ದರೂ 22 ಎಂದು ಅವರೇ ಮಾಡಿಸಿಕೊಟ್ಟ ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾಗಿತ್ತು. ನಂತರ, ಮೇ 8, 2018ರಂದು ಈಕೆಯನ್ನು ಕುವೈತ್‌ಗೆ ಕರೆದೊಯ್ಯಲಾಯಿತು. ಜುಲೈ 13ಕ್ಕೆ ವೀಸಾ ಅಂತ್ಯಗೊಳ್ಳಬೇಕಿತ್ತು. ಅಲ್ಲದೆ, ಬ್ಯೂಟಿಷಿಯನ್ ಬದಲು ಅವಳಿಗೆ ಮನೆ ಕೆಲಸವನ್ನು ನೀಡಲಾಗಿತ್ತು ಎಂದು ಸುಷ್ಮಾ ಸ್ವರಾಜ್‌ಗೆ ಪತ್ರದ ಮೂಲಕ ಯುವತಿಯ ತಾಯಿ ವಿವರಿಸಿದ್ದಾರೆ.

ಸದ್ಯ, ಕುವೈತ್‌ನಲ್ಲಿ ತನ್ನ ಮಗಳು ಎಲ್ಲಿದ್ದಾಳೆ ಎಂಬುದು ಸಹ ಗೊತ್ತಿಲ್ಲ. ಆದರೆ, ತನ್ನ ಮಾಲೀಕರಿಂದ ತನ್ನನ್ನು ಕಾಪಾಡಿ ಎಂದು ಮಲನ್ ಬೇಗಂ ಹಲವಾರು ಬಾರಿ ಕರೆ ಮಾಡಿದ್ದಾಳೆ. ಆದರೆ, ಮಾಲೀಕ ಮಾತ್ರ ಅವಳನ್ನು ಬಿಡಲು 3 ಲಕ್ಷ ರೂ. ಕೇಳುತ್ತಿದ್ದಾಳೆ. ಇನ್ನು, ತನ್ನ ಪುತ್ರಿ ಅನಾರೋಗ್ಯಕ್ಕೆ ಒಳಗಾಗಿದ್ದರೂ ಸಹ ಅವಳಿಗೆ ಯಾವುದೇ ರೀತಿಯ ಔಷಧವನ್ನಾಗಲೀ ಚಿಕಿತ್ಸೆಯನ್ನಾಗಲೀ ಕೊಡುತ್ತಿಲ್ಲ ಎಂದು ತಾಯಿ ರುಕಿಯಾ ಬೇಗಂ ಆರೋಪಿಸಿದ್ದಾಳೆ.

ಇನ್ನು, ತನ್ನ ಮಗಳನ್ನು ವಾಪಸ್ ಕರೆತರುವಂತೆ ಏಜೆಂಟ್‌ಗೆ ಹೇಳಿದರೂ ಅವರು ಸಹಕರಿಸುತ್ತಿಲ್ಲ. ಅಲ್ಲದೆ, ವಿದೇಶಾಂಗ ಸಚಿವಾಲಯ ಹಾಗೂ ಕುವೈತ್‌ನಲ್ಲಿರುವ ಭಾರತ ರಾಯಭಾರಿ ಕಚೇರಿಗೆ ದೂರು ನೀಡಲು ಪಾಸ್‌ಪೋರ್ಟ್ ಪ್ರತಿಯನ್ನು ಸಹ ಅವರ ಬಳಿ ಇಟ್ಟುಕೊಂಡಿದ್ದರೂ ನೀಡುತ್ತಿಲ್ಲ ಎಂದು ಸಹ ತಾಯಿ ಹೇಳಿಕೊಂಡಿದ್ದಾರೆ. ಇನ್ನು, ಮಜಲಿಸ್ ಬಚಾವೋ ತೆಹ್ರೀಕ್ ನಾಯಕ ಅಮ್ಜದ್ ಉಲ್ಲಾಹ್ ಖಾನ್ ಸಹ ಈ ವಿಚಾರವನ್ನು ಸುಷ್ಮಾ ಸ್ವರಾಜ್‌ ಜತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Comments are closed.