ರಾಷ್ಟ್ರೀಯ

ಹೆಂಡತಿಯ ಮೇಲೆ ಪತಿ ಮತ್ತು ನಾಲ್ವರು ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ನೋಯ್ಡಾ: ನಿರ್ಲಜ್ಜ ಪತಿಯೋರ್ವ ನಾಲ್ಕು ಜನ ಸಂಬಂಧಿಕರ ಜತೆ ಸೇರಿ ಪತ್ನಿಯ ಮೇಲೆಯೇ ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ದಾದ್ರಿಯ ಜಾರ್ಚಾ ಗ್ರಾಮದಲ್ಲಿ ನಡೆದಿದೆ.

ಜುಲೈ 7 ರಂದು ಈ ಕುಕೃತ್ಯ ನಡೆದಿದ್ದು, ಈ ಬಗ್ಗೆ ಮಹಿಳೆ ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

2004ರಲ್ಲಿ ನಮ್ಮ ಮದುವೆಯಾಗಿದ್ದು, ಮೊದಲು ಎಲ್ಲವೂ ಚೆನ್ನಾಗಿತ್ತು. 8 ವರ್ಷದ ಬಳಿಕ ಕುಡಿತದ ಚಟ ಬೆಳೆಸಿಕೊಂಡ ಪತಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ. 2014ರವರೆಗೆ ನಾವಿಬ್ಬರು ಜೊತೆಗಿದ್ದೆವು. ಆತನ ಹಿಂಸೆ ತಾಳದಾದಾಗ ಸಹೋದರಿಯ ಮನೆಗೆ ಹೋಗಿ ವಾಸಿಸತೊಡಗಿದೆ. ಆದರೆ ಅಲ್ಲಿಗೂ ಪತಿ ಬರುತ್ತಿದ್ದ. ಜುಲೈ 7 ರಂದು ನಾಲ್ಕು ಜನ ಸಂಬಂಧಿಗಳ ಜತೆ ಬಂದ ಪತಿ ಸಾಮೂಹಿಕ ಅತ್ಯಾಚಾರ ಎಸಗಿದ. ಅವರಲ್ಲೊಬ್ಬನ ಜತೆ ನಾಡ ಬಂದೂಕಿತ್ತು. ಯಾರಿಗಾದರೂ ಅತ್ಯಾಚಾರದ ಬಗ್ಗೆ ಹೇಳಿದರೆ ಸಾಯಿಸುವುದಾಗಿ ನನಗೆ ಬೆದರಿಕೆ ಒಡ್ಡಲಾಗಿತ್ತು ಎಂದು ಪೀಡಿತ ಮಹಿಳೆ ಪೊಲೀಸರಲ್ಲಿ ದೂರಿದ್ದಾಳೆ.

ಅತ್ಯಾಚಾರ ನಡೆದ ಬಗ್ಗೆ ಅನುಮಾನವಿದ್ದು, ಪತಿ ಮೇಲಿನ ದ್ವೇಷದಿಂದ ಮಹಿಳೆ ಸುಳ್ಳು ಆರೋಪ ಮಾಡಿರುವ ಸಾಧ್ಯತೆಗಳು ಇವೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸತ್ಯ ಬಹಿರಂಗವಾಗಲಿದೆ ಎಂದು ದಾದ್ರಿ ಸರ್ಕಲ್ ಅಧಿಕಾರಿ ನಿಶಾಂಕ್ ಶರ್ಮಾ ಹೇಳಿದ್ದಾರೆ.

Comments are closed.