ರಾಷ್ಟ್ರೀಯ

ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡುತ್ತಿದ್ದದ್ದನ್ನು ಫೇಸ್‌ಬುಕ್‌’ನಲ್ಲಿ ನೇರ ಪ್ರಸಾರ ಮಾಡಿದ ಮಹಿಳೆ !

Pinterest LinkedIn Tumblr


ಕೋಲ್ಕತ್ತಾ: ರೈಲ್ವೆ ನಿಲ್ದಾಣದಿಂದ ರೈಲು ಇನ್ನೇನು ಹೊರಡುವುದರಲ್ಲಿತ್ತು. ಭೋಗಿಯ ಒಳಗೆ ಕೂತಿದ್ದ ಮಹಿಳೆ ಕಣ್ಣಿಗೆ ಒಂದು ದೃಶ್ಯ ಕಾಣಿಸಿತ್ತು. ಸುಮ್ಮನೆ ಕೂರದ ಮಹಿಳೆ ಅದನ್ನು ವಿಡಿಯೋ ಮಾಡಿಕೊಂಡಿದ್ದಲ್ಲದೇ ಫೇಸ್ ಬುಕ್ ಲೈವ್ ಕೂಡಾ ಮಾಡಿದರು.

ಪಶ್ಚಿಮ ಬಂಗಾಳದ ಬಂಡೇಲ್ ರೈಲ್ವೆ ನಿಲ್ದಾಣದಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ರೈಲ್ವೆ ನಿಲ್ದಾಣದ ಹೊರಗೆ ಪ್ರತ್ಯಕ್ಷವಾದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿಯೇ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ.

ರೈಲು ಹೊರಡಲು ಅಣಿಯಾದ್ದರಿಂದ ಮಹಿಳೆ ಪ್ರತಿಭಟಿಸಲು ಮುಂದಾಗಿಲ್ಲ, ಆದರೆ ಮೊಬೖಲ್ ತೆಗೆದು ವ್ಯಕ್ತಿಯ ಅನುಚಿತ ವರ್ತನೆಯನ್ನು ಫೇಸ್ ಬುಕ್ ಲೈವ್ ಮಾಡಿದ್ದಾಳೆ. ಇಂದು ಪ್ರತಿಯೊಂದಕ್ಕೂ ಸಾಕ್ಷಿ ಕೇಳುತ್ತಾರೆ, ಹಾಗಾಗಿ ಲೈವ್ ಮಾಡಿದೆ ಎಂದು ಮಹಿಳೆ ನಂತರ ಹೇಳಿದ್ದಾಳೆ.

ಲೈವ್ ವೀಕ್ಷಿಸಿದ ಕೆಲ ಮಹಿಳೆಯರು ಇದನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮಾನಸಿಕ ಅಸ್ವಸ್ಥನಂತೆ ತೋರುತ್ತಿದ್ದ ವ್ಯಕ್ತಿ ಜಾಗ ಖಾಲಿ ಮಾಡಿದ್ದಾನೆ. ಒಂದಿಷ್ಟು ಜನರಿಗೆ ಇರಿಸು ಮುರಿಸು ತಂದರೂ ಮಹಿಳೆ ಮಾಡಿದ್ದು ಸರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Comments are closed.