ರಾಷ್ಟ್ರೀಯ

ದೀರ್ಘಾವಧಿಯ ಲೈಂಗಿಕ ಸಂಬಂಧವನ್ನು ವಿವಾಹಕ್ಕೆ ಸಮನಾದದ್ದು ಎಂದು ಪರಿಗಣಿಸಬೇಕೇ…? ‘ಸುಪ್ರೀಂ’ ಪ್ರಶ್ನೆ

Pinterest LinkedIn Tumblr

ನವದೆಹಲಿ: ದೀರ್ಘಾವಧಿಯ ಲೈಂಗಿಕ ಸಂಬಂಧವನ್ನು ವಿವಾಹಕ್ಕೆ ಸಮನಾದದ್ದು ಎಂದು ಪರಿಗಣಿಸಬೇಕೇ? ಎಂದು ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ನ ಅಭಿಪ್ರಾಯ ಕೇಳಿದೆ.

ಹಲವು ವರ್ಷಗಳ ಕಾಲ ಜೊತೆಗಿದ್ದು, ನಂತರ ಅತ್ಯಾಚಾರ ನಡೆದಿದೆ ಎಂದು ಕೋರ್ಟ್ ಎದುರು ಬರುವ ಪ್ರಕರಣಗಳನ್ನು ಉಲ್ಲೇಖಿಸಿರುವ ಕೋರ್ಟ್, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ತನ್ನಲ್ಲಿಗೆ ಬರುತ್ತಿದೆ. ಈ ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಕ್ಕೆ ಪುರುಷರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ದೀರ್ಘಾವಧಿಯ ಲೈಂಗಿಕ ಸಂಬಂಧವನ್ನು ವಿವಾಹಕ್ಕೆ ಸಮ ಎಂದು ಪರಿಗಣಿಸಬೇಕೆ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದೆ.

ತಮ್ಮ ಮೇಲೆ ಹೊರಿಸಲಾಗಿರುವ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿ, ತನ್ನ ವಿರುದ್ಧ ಅತ್ಯಾಚಾರದ ಆರೋಪ ಮಾಡುತ್ತಿರುವ ಮಹಿಳೆಯೊಂದಿಗೆ ತನಗೆ ದೀರ್ಘಾವಧಿಯ ಲೈಂಗಿಕ ಸಂಬಂಧವಿತ್ತು, ಆದ್ದರಿಂದ ನನ್ನ ವಿರುದ್ಧದ ಅತ್ಯಾಚಾರ ಆರೋಪವನ್ನು ರದ್ದುಗೊಳಿಸಬೇಕೆಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ದೀರ್ಘಾವಧಿಯ ಲೈಂಗಿಕ ಸಂಬಂಧ, ವಿವಾಹಕ್ಕೆ ಸಮವೆಂದು ಪರಿಗಣಿಸಬೇಕೇ? ಎಂದು ಕೇಳಿದೆ. ಪ್ರಕರಣದ ವಿಚಾರಣೆಯನ್ನು ಸೆ.12 ಕ್ಕೆ ಮುಂದೂಡಲಾಗಿದೆ.

Comments are closed.