ರಾಷ್ಟ್ರೀಯ

92ರ ಎಂ ಎಸ್‌ ಸ್ವಾಮಿನಾಥನ್‌ಗೆ 84ನೇ ಗೌರವ ಡಾಕ್ಟರೇಟ್‌ ಗೌರವ

Pinterest LinkedIn Tumblr


ಚೆನ್ನೈ: 92 ವರ್ಷದ ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌ 84ನೇ ಗೌರವ ಡಾಕ್ಟರೇಟ್‌ ಪದವಿ ಪಡೆದುಕೊಂಡಿದ್ದಾರೆ.

ಸುಸ್ಥಿರ ಕೃಷಿ ವಿಧಾನ ಹಾಗೂ ಜಾಗತಿಕ ಆಹಾರ ಭದ್ರತೆ ವಿಚಾರದಲ್ಲಿ ನಡೆಸಿದ ಸಂಶೋಧನೆಗಾಗಿ ಗ್ವಾಲಿಯರ್‌ ಐಟಿಎಂ ವಿಶ್ವವಿದ್ಯಾಲಯದಿಂದ ಡಾಕ್ಟರ್‌ ಆಫ್‌ ಲೆಟರ್ಸ್‌ ಡಿಗ್ರಿ ಪಡೆದುಕೊಂಡಿದ್ದಾರೆ.

ತಮ್ಮ 92ನೇ ವಯಸ್ಸಿನಲ್ಲಿ 84ನೇ ಗೌರವ ಡಾಕ್ಟರೇಟ್‌ ಪದವಿ ಪಡೆದುಕೊಂಡಿದ್ದು, ಇವುಗಳಲ್ಲಿ 24 ಗೌರವ ಡಾಕ್ಟರೇಟ್‌ ಪದವಿಗಳು ಅಂತಾರಾಷ್ಟ್ರೀಯ ವಿವಿಗಳಿಂದ ಲಭಿಸಿವೆ.
ಎಂ.ಎಸ್‌. ಸ್ವಾಮಿನಾಥನ್‌ ಸಂಶೋಧನಾ ಫೌಂಡೇಷನ್‌ ಆವರಣದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರಿಗೆ 84ನೇ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗಿದೆ. ವಿವಿಯ ಕುಲಪತಿ ಡಾ. ಕಮಲ್‌ ಕಂತ್‌ ದ್ವಿವೇದಿ ಅವರು ಸ್ವಾಮಿನಾಥನ್‌ ಅವರಿಗೆ ಪದವಿ ಪ್ರದಾನ ಮಾಡಿದ್ದಾರೆ.

ಸುಸ್ಥಿರ ಕೃಷಿಯಿಂದ ಮಾತ್ರ ಹಸಿವು ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಎಂ.ಎಸ್‌. ಸ್ವಾಮಿನಾಥನ್‌ ಇದೇ ವೇಳೆ ಅಭಿಪ್ರಾಯಪಟ್ಟರು.

Comments are closed.