ರಾಷ್ಟ್ರೀಯ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮನೆಯಲ್ಲಿ ತಿರುಪತಿಯಿಂದ ಕದ್ದ ಆಭರಣ!

Pinterest LinkedIn Tumblr


ಹೈದರಾಬಾದ್‌: ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಬೆಲೆಬಾಳುವ ಆಭರಣಗಳು ಕಳವಾಗಿವೆ ಮತ್ತು ಟಿಟಿಡಿಯಿಂದ ಅವ್ಯವಹಾರಗಳು ನಡೆದಿವೆ ಎಂಬ ಆರೋಪಕ್ಕೆ ಹೊಸ ತಿರುವು ದೊರಕಿದ್ದು, ದೇವಾಲಯದಿಂದ ಕಳವಾದ ಆಭರಣಗಳು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸದಲ್ಲಿವೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಂಸದ ವಿ. ವಿಜಯಸಾಯಿ ರೆಡ್ಡಿ ಬುಧವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಸಿಬಿಐನಂತಹ ಸ್ವತಂತ್ರ ತನಿಖಾ ತಂಡಗಳು ಚಂದ್ರಬಾಬು ನಾಯ್ಡು ಅವರ ಅಮರಾವತಿ ಮತ್ತು ಹೈದರಾಬಾದ್‌ ನಿವಾಸದ ಮೇಲೆ 12 ಗಂಟೆಯ ಒಳಗಾಗಿ ದಾಳಿ ನಡೆಸಿದರೆ ಆಭರಣಗಳನ್ನು ವಶಪಡಿಸಿಕೊಳ್ಳಬಹುದು.

ಇಲ್ಲವಾದರೆ ಅವು ವಿದೇಶಗಳ ಪಾಲಾಗುತ್ತವೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಅವರ ನಿವಾಸದಲ್ಲಿ ಆಭರಣಗಳು ಲಭಿಸದೇ ಇದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

Comments are closed.