ಕರಾವಳಿ

ವೇದವ್ಯಾಸ್ ಕಾಮತ್ ಬಿರುಸಿನ ಮತಪ್ರಚಾರ : ಸಾಥ್ ನೀಡಿದ ಚಿತ್ರನಟ ಸಚಿನ್ ಸುವರ್ಣ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ್ ಕಾಮತ್ ಅವರು ದೇರೆಬೈಲ್ ಪಶ್ಚಿಮ ವಾರ್ಡ್ ರಲ್ಲಿ ಮನೆ ಮನೆಗೆ ಭೇಟಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ನರೇಂದ್ರ ಮೋದಿಯವರು ಬಂದು ಹೋದ ಮೇಲೆ ಮಂಗಳೂರಿನ ಪ್ರತಿ ಮನೆಯಲ್ಲೂ ಕೂಡಾ ಬಿಜೆಪಿ ಪರ ಒಲವು ಹೆಚ್ಚಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ಶ್ರೀ ರವಿಶಂಕರ್ ಮಿಜಾರ್, ಕೃಷ್ಣ, ಉಮೇಶ್ ಶೆಟ್ಟಿ, ವಸಂತ್ ಜೆ ಪೂಜಾರಿ, ಸುರೇಶ್ ಕುಲಾಲ್, ವಸಂತ್, ಗುರುಪ್ರಸಾದ್ ರಾವ್, ದೇವಿಪ್ರಸಾದ್ ಶೆಟ್ಟಿ, ಸುಧಾಕರ ಆಳ್ವ, ಸುಭಾಷ್, ಗೀತಾ, ಮಲ್ಲಿಕಾ, ದೀಪಲ್ ಪ್ರೀತ್ ಶೆಟ್ಟಿ ಮುಂತಾದವರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.​

ಚಿತ್ರನಟ ಸಚಿನ್ ಸುವರ್ಣರವರಿಂದ ವೇದವ್ಯಾಸ ಕಾಮತ್ ಪರ ಮತಪ್ರಚಾರ :

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕದ್ರಿ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಮಹಿಳಾ ಕಾರ್ಯಕರ್ತರು ಬಿರುಸಿನ ಮತಪ್ರಚಾರದ ನಡೆಸಿದರು.

ಈ ಸಂಧರ್ಭದಲ್ಲಿ ಚಿತ್ರನಟ ಸಚಿನ್ ಸುವರ್ಣ , ವ್ರ೦ದಾ ವೇದವ್ಯಾಸ್ ಕಾಮತ್ , ರೂಪಾ ಡಿ . ಬಂಗೇರಾ , ಕಾತ್ಯಾಯನಿ , ಡಾ . ಮಂಜುಳಾ ರಾವ್ , ನಿವೇದಿತಾ ಶೆಟ್ಟಿ , ವೈಷ್ಣವಿ ವಾಸುದೇವ್ ಕಾಮತ್ ಉಪಸ್ಥಿತರಿದ್ದರು .

Comments are closed.