ಮನೋರಂಜನೆ

‘ಕೋಸ್ಟಲ್‌ವುಡ್‌’ಗೆ ತಲೆಬಾಗಿದ ‘ಸ್ಯಾಂಡಲ್‌ವುಡ್‌’ ಹೀರೋ!

Pinterest LinkedIn Tumblr


‘ಪ್ರಾದೇಶಿಕ ನೆಲೆಯ ಜಾಗದಲ್ಲಿ ತುಳು ಭಾಷೆಯ ಸಿನೆಮಾ ಮಾಡಿಕೊಂಡು ಇಂದು ಸಖತ್‌ ರೆಸ್ಪಾನ್ಸ್‌ ಪಡೆಯುತ್ತಿರುವ
ಕೋಸ್ಟಲ್‌ವುಡ್‌ನ‌ ಹಿರಿಮೆ ನಿಜಕ್ಕೂ ಶ್ಲಾಘನೀಯ. ಕನ್ನಡ ನೆಲದಲ್ಲಿಯೇ ಕನ್ನಡ ಸಿನೆಮಾದ ಜತೆಗೆ ತುಳು ಭಾಷೆಯ ಸಿನೆಮಾ ಕೂಡ ಇಂದು ಹಿಟ್‌ ಪಡೆಯುತ್ತಿದೆ ಎಂಬುದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ’ ಹೀಗೆನ್ನುತ್ತ ಕೋಸ್ಟಲ್‌ವುಡ್‌ ಸಾಧನೆಗೆ ಸ್ಯಾಂಡಲ್‌ವುಡ್‌ ಎವರ್‌ಗ್ರೀನ್‌ ಕಿಚ್ಚ ಸುದೀಪ್‌ ಮಂಗಳೂರಿನಲ್ಲಿಯೇ ಮೆಚ್ಚಿ ಕೊಂಡಾಡಿದ್ದಾರೆ.

‘ನನ್ನ ತಾಯಿ ತುಳುವಿನವರು. ತುಳು ಭಾಷೆ ಒಂದು ರೀತಿ ಕೇಳುವುದಕ್ಕೆ ತುಂಬಾನೆ ಇಷ್ಟ ಆಗುತ್ತದೆ. ತುಳುವರದ್ದು ಇನ್ನೊಂದು ವಿಶೇಷ ಗುಣ ಅಂದರೆ, ನಗು ನಗುತ್ತ ಮಾತನಾಡಿ, ಯಾರಿಗೆ ಯಾವಾಗ ಬೈಯ್ಯುತ್ತೀರಿ ಎಂಬುದೇ ಗೊತ್ತಾಗುವುದಿಲ್ಲ. ತುಳು ಸಿನೆಮಾದ ಪ್ರಗತಿ ಬಗ್ಗೆ ಕುತೂಹಲದಿಂದ ನಾನು ನೋಡುತ್ತಿರುತ್ತೇನೆ. ತುಂಬಾ ಆಶ್ಚರ್ಯ ಆಗುತ್ತದೆ. ಮುಂದೆ ತುಳು ಸಿನೆಮಾಕ್ಕೆ ಯಾವುದೇ ಹಂತದ ಸ್ಪಂದನೆಗೂ ನಾನು ರೆಡಿಯಿದ್ದೇನೆ. ನೀವು ಕರೆದರೆ ನಾನು ಬರುವೆನು’ ಎಂದು ‘ಕಟಪಾಡಿ ಕಟ್ಟಪ್ಪೆ’ ಸಿನೆಮಾದ ಆಡಿಯೋ ರಿಲೀಸ್‌ ಸಂದರ್ಭದಲ್ಲಿ ಸುದೀಪ್‌ ಹೇಳಿದ್ದಾರೆ.

-Udayavani

Comments are closed.