ಕರಾವಳಿ

ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆ ನಕಲು ಪ್ರಕರಣ : ಶಾಸಕ ಮೊಯ್ದಿನ್ ಬಾವ ಕ್ಷಮೆಯಾಚನೆ

Pinterest LinkedIn Tumblr

ಮಂಗಳೂರು, ಮಾರ್ಚ್.11: ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯ ನಕಲು ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಮಂಗಳೂರು ಉತ್ತರ ವಿಧನಾ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರು ಈ ಬಗ್ಗೆ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟಣೆ ನೀಡಿದ ಶಾಸಕರು, ನನ್ನ ಗಮನಕ್ಕೆ ಬಾರದೆ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗೆ ಹೋಲಿಕೆಯಾಗುವ ಪದ್ಯ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ಹರಿದಾಡುತ್ತಿದೆ. ಇದರಿಂದಾಗಿ ಯಾವುದೇ ವ್ಯಕ್ತಿ ಗಳಿಗೆ ನೋವಾಗಿದ್ದರೆ ಅದಕ್ಕಾಗಿ ಈ ಮೂಲಕ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಅಯ್ಯಪ್ಪ ಸ್ವಾಮಿಯ ವಿಶೇಷ ಭಕ್ತ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಯ್ಯಪ್ಪ ಸ್ವಾಮಿಯ ಮಂದಿರಗಳಿವೆ. ಅಲ್ಲಿಗೆ ನಾನು ಭೇಟಿ ನೀಡಿದ್ದೇನೆ. ಮಕರ ಸಂಕ್ರಮಣದ ಸಂದರ್ಭದಲ್ಲಿ ನಾನು ಅಕ್ಕಿ ದಾನ ನೀಡಿ, ಸಹಕರಿಸಿದ್ದೇನೆ. ಯಾವ ಧರ್ಮದವರಿಗೂ ನೋವನ್ನುಂಟು ಮಾಡುವ ಕೆಲಸ ನಾನು ಮಾಡಿಲ್ಲ, ಈ ಹಾಡನ್ನು ಯಾರು ರಚಿಸಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಶಾಸಕ ಮೊಯ್ದಿನ್ ಬಾವ ಅವರು ಹೇಳಿದ್ದಾರೆ.

Comments are closed.