ರಾಷ್ಟ್ರೀಯ

ಗುವಾಹಟಿ: 12 ಮನೆ ಬೆಂಕಿಯಲ್ಲಿ ಭಸ್ಮ; 3 ಬಾಲಕಿಯರ ಸಾವು

Pinterest LinkedIn Tumblr


ಗುವಾಹಟಿ : ಇಲ್ಲಿನ ಬಶಿಷ್ಠ ಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 12 ಮನೆಗಳು ಬೆಂಕಿಗೆ ಆಹುತಿಯಾಗಿದ್ದು ಮೂವರು ಬಾಲಕಿಯರು ಸುಟ್ಟು ಕರಕಲಾಗಿರುವ ಮತ್ತು ಇನ್ನಿಬ್ಬರು ಮಕ್ಕಳು ಗಂಭೀರ ಸುಟ್ಟ ಗಾಯಳಿಗೆ ಗುರಿಯಾಗಿರುವ ದಾರುಣ ಘಟನೆ ನಡೆದಿದೆ.

ಬಶಿಷ್ಠ ಪ್ರದೇಶದ ಪತರ್‌ಕುಚಿ ಎಂಬಲ್ಲಿ ಇಂದು ಬೆಳಗ್ಗೆ ಒಂದು ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿತು. ಅನಂತರ ಬೆಂಕಿ ಇತರ 11 ಮನೆಗಳಿಗೆ ಹರಡಿಕೊಂಡಿತು. ಮೂವರು ಹುಡುಗಿಯರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಯ ಕಾರಣ ಮತ್ತು ಅದರಿಂದುಂಟಾದ ನಾಶ ನಷ್ಟದ ನಿಖರ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ.

ಸ್ಥಳೀಯ ಜನರ ಪ್ರಕಾರ ಇದು ಬೇಕೆಂದೇ ಯಾರೋ ಮಾಡಿದು ದುರುಳತನದ ಕೃತ್ಯವಾಗಿದೆ. ಪೊಲೀಸರು ಎಲ್ಲ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ.

-ಉದಯವಾಣಿ

Comments are closed.