
ನವದೆಹಲಿ: ಆಮ್ ಆದ್ಮಿ ಪಾರ್ಟಿಯ 20 ಶಾಸಕರನ್ನು ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಅನರ್ಹಗೊಳಿಸಲಾಗಿದೆ.
ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಆಪ್ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಶುಕ್ರವಾರ ಶಿಫಾರಸು ಮಾಡಿತ್ತು. ಅದರಂತೆ ಭಾನುವಾರ ಆಪ್ ಶಾಸಕರನ್ನು ಅನರ್ಹಗೊಳಿಸಲು ರಾಷ್ಟ್ರಪತಿ ಅಂಕಿತ ನೀಡಿದ್ದಾರೆ.
2015ರಲ್ಲಿ ಆಪ್ ಕ್ಯಾಬಿನೆಟ್ ಮಂತ್ರಿ ಆಸಿಮ್ ಅಹಮದ್ ಖಾನ್ರನ್ನು ವಜಾಗೊಳಿಸಿತ್ತು. ಅದೇ ವರ್ಷ ಇನ್ನೊರ್ವ ಸಚಿವ ಸಂದೀಪ್ ಕುಮಾರ್ ಸೆಕ್ಸ್ ಸ್ಕ್ಯಾಂಡಲ್ನಲ್ಲಿ ಸಿಲುಕಿಕೊಂಡಿದ್ದರು. ಆಪ್ ಕ್ಯಾಬಿನೆಟ್ ಪುನರಚನೆ ಸಂದರ್ಭದಲ್ಲಿ ಕಪಿಲ್ ಮಿಶ್ರಾರನ್ನು ವಜಾ ಮಾಡಲಾಗಿದ್ದು ನಂತರ ಅವರು ಪಕ್ಷದ ವಿರುದ್ಧ ಬಂಡಾಯವೆದ್ದರು. ರಜೌರಿ ಗಾರ್ಡನ್ನ ಆಪ್ ಎಮ್ಎಲ್ಎ ಪಂಜಾಬ್ ಅಸೆಂಬ್ಲಿಯನ್ನು ಸ್ಪರ್ಧಿಸಲು ತನ್ನ ಸ್ಥಾನದಿಂದ ಹೊರಬಂದರು. ಹಾಗಾಗಿ 67 ಶಾಸಕರಿಂದ 63ಕ್ಕೆ ಇಳಿಯಿತು. ಇದೀಗ 20 ಶಾಸಕರನ್ನು ಅನರ್ಹ ಗೊಳಿಸಿರುವುದರಿಂದ ಆಪ್ನ ಶಾಸಕರ ಸಂಖ್ಯೆ 42ಕ್ಕೆ ಇಳಿದಿದೆ.
Comments are closed.