ರಾಷ್ಟ್ರೀಯ

ಆಕರ್ಷಕ, ಆರೋಗ್ಯಕರ ಉಗುರು ನಿಮ್ಮದಾಗಬೇಕೆ?

Pinterest LinkedIn Tumblr


ಸೌಂದರ್ಯ ಎಂದ ಮೇಲೆ ಬರೀ ತ್ವಚೆ, ಕೂದಲಿನ ಸೌಂದರ್ಯ ಮಾತ್ರವಲ್ಲ, ಉಗುರಿನ ಸೌಂದರ್ಯ ಪ್ರಮುಖವಾಗಿರುತ್ತದೆ. ಆಕರ್ಷಕ ಉಗುರುಗಳು ನಮ್ಮ ಲುಕ್‌ ಮತ್ತಷ್ಟು ಹೆಚ್ಚಿಸುವುದರಲ್ಲಿ ನೋ ಡೌಟ್‌.

ಇಲ್ಲಿ ನಾವು ಉಗುರಿನ ಸೌಂದರ್ಯ ಹೆಚ್ಚಿಸುವ ಟಿಪ್ಸ್ ನೀಡಿದ್ದೇವೆ ನೋಡಿ:

ಚಳಿಗಾಲದಲ್ಲಿ ತ್ವಚೆಯಂತೆಯೇ ಉಗುರಿನ ಸೌಂದರ್ಯ ಮಂಕಾಗುವುದು. ಉಗುರು ಆಕರ್ಷಕವಾಗಿ ಕಾಣಲು ಉಗುರನ್ನು ಮಾಯಿಶ್ಚರೈಸರ್‌ ಮಾಡುವುದು ಒಳ್ಳೆಯದು. ಸ್ನಾನದ ಬಳಿಕ ಮಾಯಿಶ್ಚರೈಸರ್‌ ಅಥವಾ ಆಲೀವ್‌ ಎಣ್ಣೆ/ತೆಂಗಿನೆಣ್ಣೆಯಿಂದ ಮಸಾಜ್‌ ಮಾಡಿ.

ವಾರಕೊಮ್ಮೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ಹಾಗೂ ಕಾಲುಗಳನ್ನು 10 ನಿಮಿಷ ಇರಿಸಿ, ನಂತರ ಉಗುರುಗಳನ್ನು ನಿಂಬೆ ಹಣ್ಣಿನ ಚಿಕ್ಕ ತುಂಡಿನಿಂದ ಉಜ್ಜಿ, ನಂತರ ಕೈ ಕಾಲು ತೊಳೆದು ಉಗುರಿಗೆ ಮಾಯಿಶ್ಚರೈಸರ್‌ ಮಾಡಿ.

ಈ ರೀತಿ ಮಾಡುವುದರಿಂದ ಉಗುರಿನ ಸೌಂದರ್ಯ ಹೆಚ್ಚುವುದಲ್ಲದೆ, ಉಗುರು ಬೇಗನೆ ಮುರಿಯುವುದನ್ನು ತಡೆಯಬಹುದು.

ಚಳಿಯಲ್ಲಿ ಹೋಗುವಾಗ ಗ್ಲೌಸ್‌ ಬಳಸಿ. ಉಗುರನ್ನು ಕತ್ತರಿಸಿ, ಆಕರ್ಷಕವಾಗಿ ಕಾಣುವಂತೆ ಮಾಡಿ.

ಇವುಗಳಲ್ಲದೆ ಉಗುರಿನ ಆರೋಗ್ಯಕ್ಕೆ ವಿಟಮಿನ್ಸ್‌ ಅಗತ್ಯವಾಗಿರುವುದರಿಂದ ಪ್ರೊಟೀನ್‌, ಕ್ಯಾಲ್ಸಿಯಂ, ವಿಟಮಿನ್ಸ್ ಇರುವ ಆಹಾರ ಸೇವನೆ ಮಾಡಿ.

Comments are closed.