ರಾಷ್ಟ್ರೀಯ

ತಮಿಳುನಾಡಿನ ಮಧುರೆ ಜಲ್ಲಿಕಟ್ಟು ಕ್ರೀಡೆ: ವೀಕ್ಷಕ ಯುವಕ ಬಲಿ

Pinterest LinkedIn Tumblr


ಚೆನ್ನೈ: ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ನೋಡಲೆಂದು ಬಂದಿದ್ದ ಹದಿಹರೆಯದ ಯುವಕನೋರ್ವನು ತನ್ನ ಮೇಲೇರಿ ಬಂದ ಕೋಣನ ದಾಳಿಗೆ ಬಲಿಯಾದ ದಾರುಣ ಘಟನೆ ತಮಿಳು ನಾಡಿನ ಮಧುರೆ ಜಿಲ್ಲೆಯಲ್ಲಿ ಇಂದು ಸೋಮವಾರ ನಡೆದಿದೆ.

ಮೃತ ತರುಣನನ್ನು ಡಿಂಡಿಗಲ್‌ ಜಿಲ್ಲೆಯ ನಿವಾಸಿ ಕಳಿಮುತ್ತು ಎಂದು ಗುರುತಿಸಲಾಗಿದೆ. ಓಟ ಮುಗಿಸುವ ಕೋಣಗಳನ್ನು ಅದರ ಮಾಲಕರು ಸ್ವೀಕರಿಸುವ ತಾಣದಲ್ಲಿ ಪ್ರೇಕ್ಷಕನಾಗಿ ನಿಂತುಕೊಂಡಿದ್ದ ಆತನ ಮೇಲೆ ಕೋಣ ಎರಗಿ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟ. ಇದೇ ವೇಳೆ ಇತರ ಸುಮಾರು 25 ಮಂದಿ ಕೂಡ ಗಾಯಗೊಂಡರು. ಈ ಘಟನೆ ನಡೆದದ್ದು ಮಧುರೆಯಿಂದ ಸುಮಾರು 500 ಕಿ.ಮೀ.ದೂರದ ಪಾಲಮೇಡು ಎಂಬಲ್ಲಿ ನಡೆದಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ .

ಇಂದು ಬೆಳಗ್ಗೆ ಆರಂಭಗೊಂಡಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಸುಮಾರು 455 ಕೋಣಗಳು ಪಾಲ್ಗೊಂಡಿದ್ದವು.

-ಉದಯವಾಣಿ

Comments are closed.