ರಾಷ್ಟ್ರೀಯ

ದಂಗೆ ಎದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕರ್ತವ್ಯಕ್ಕೆ ಹಾಜರ್

Pinterest LinkedIn Tumblr


ಹೊಸದಿಲ್ಲಿ: ಕಳೆದವಾರ ನ್ಯಾಯಮೂರ್ತಿಗಳು ಬಂಡಾಯ ಎದ್ದ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ದಂಗೆ ಎದ್ದ ನ್ಯಾಯಮೂರ್ತಿಗಳು ಸೋಮವಾರ ಕಲಾಪದಲ್ಲಿ ಪಾಲ್ಗೊಂಡಿದ್ದರು.

ನ್ಯಾಯಮೂರ್ತಿಗಳಾದ ಚಲಮೇಶ್ವರ್‌, ರಂಜನ್‌ ಗೊಗೊಯಿ, ಮದನ್‌ ಲೊಕುರ್‌, ಕುರಿಯನ್‌ ಜೋಸೆಫ್‌ ಸೋಮವಾರ ಕಲಾಪ ನಡೆಸಿದರು.

ನಾಲ್ವರು ನ್ಯಾಯಮೂರ್ತಿಗಳು ಕಳೆದ ಮೊಟ್ಟ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಹಾಗೂ ನ್ಯಾಯಾಂಗದ ವ್ಯವಸ್ಥೆ ವಿರುದ್ಧವೇ ದೂರು ಸಲ್ಲಿಸಿದ್ದರು.

ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮಧ್ಯಸ್ಥಿಕೆ ವಹಿಸಿ ಭಾನುವಾರ ಉಭಯ ಬಣಗಳ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿತ್ತು.

ದಂಗೆ ಎದ್ದ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಜತೆ ಪ್ರತ್ಯೇಕ ಮಾತುಕತೆ ನಡೆಸಿದದ ಬಿಸಿಐ ನಿಯೋಗದ ಪದಾಧಿಕಾರಿಗಳು, ಇದೊಂದು ಆಂತರಿಕ ಸಮಸ್ಯೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದರು.

Comments are closed.