ರಾಷ್ಟ್ರೀಯ

ಮೇವಾನಿ ರಾಲಿಗೆ ಅನುಮತಿ ಪರಿಶೀಲನೆಯಲ್ಲಿ: ದಿಲ್ಲಿ ಪೊಲೀಸ್‌

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಾಳೆ ಮಂಗಳವಾರ ರಾಲಿ ನಡೆಸುವುದಕ್ಕೆ ತನಗೆ ಅನುಮತಿ ನೀಡಬೇಕೆಂಬ ಗುಜರಾತ್‌ನ ವಡ್ಗಾಂವ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರ ಮನವಿ ಇನ್ನೂ ಪರಿಶೀಲನೆಯಲ್ಲಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ದಿಲ್ಲಿಯಲ್ಲಿ ನಾಳೆ ಮಂಗಳವಾರ ನಡೆಯಲಿರುವ ಸಾಮಾಜಿಕ ನ್ಯಾಯ ರಾಲಿ ಅಥವಾ ಯುವ ಹೂಂಕಾರ್‌ ರಾಲಿಯಲ್ಲಿ ಜಿಗ್ನೇಶ್‌ ಮೇವಾನಿ ಮತ್ತು ಅಸ್ಸಾಮಿನ ರೈತ ನಾಯಕ ಅಖೀಲ್‌ ಗೊಗೋಯ್‌ ಭಾಷಣ ಮಾಡಲಿದ್ದಾರೆ.

ಈ ರಾಲಿಯ ಓರ್ವ ಸಂಘಟಕ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಮೋಹಿತ್‌ ಕುಮಾರ್‌ ಪಾಂಡೆ ಅವರು, “ನಾಳೆಯ ಈ ಪ್ರಸ್ತಾವಿತ ರಾಲಿಯನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ; ರಾಲಿಗೆ ಅನುಮತಿ ನೀಡಲಾಗಿಲ್ಲ ಎಂಬ ಸುಳ್ಳು ಸುದ್ದಿಯನ್ನು ಕೂಡ ಮಾಧ್ಯಮಗಳು ಹರಡುತ್ತಿವೆ’ ಎಂದು ದೂರಿದರು.

-ಉದಯವಾಣಿ

Comments are closed.