ಕ್ರೀಡೆ

ಕೊಹ್ಲಿಯನ್ನು ಆಫ್ರಿಕಾದಲ್ಲಿ ಬಿಟ್ಟು ಭಾರತಕ್ಕೆ ವಾಪಸ್ ಬಂದ ಪತ್ನಿ ಅನುಷ್ಕಾ ! ಕೊಹ್ಲಿ ಔಟ್ ಆಗಲು ಕಾರಣಳಾದಲೇ ಅನುಷ್ಕಾ !!

Pinterest LinkedIn Tumblr

ಮುಂಬೈ: ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕುರಿತಂತೆ ಟ್ವಿಟರ್ ನಲ್ಲಿ ವ್ಯಾಪಕವಾಗಿ ಟ್ರಾಲ್ ಗೆ ಒಳಗಾಗಿದ್ದ ಪತ್ನಿ ಅನುಷ್ಕಾ ಶರ್ಮಾ ಭಾರತಕ್ಕೆ ವಾಪಸ್ ಆಗಿದ್ದಾರೆ.

ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ತಂಡದ ವಿರುದ್ದದ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಕೇವಲ 5 ರನ್ ಗಳಿಗೆ ಔಟ್ ಆಗಿದ್ದರು. ವಿಶೇಷವೆಂದರೆ ಈ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ವಿರಾಟ್ ಗೆ ಹುರಿದುಂಬಿಸುತ್ತಿದ್ದರು. ಆದರೆ ಕೊಹ್ಲಿ ಕೇವಲ 5 ರನ್ ಗಳಿಗೆ ಔಟ್ ಆಗಿ ಪತ್ನಿ ಮಾತ್ರವಲ್ಲದೇ ಅಭಿಮಾನಿಗಳಿಗೂ ನಿರಾಶೆ ಮೂಡಿಸಿದ್ದರು.

ಇನ್ನು ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕೊಹ್ಲಿ ಮತ್ತು ಅನುಷ್ಕಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅನುಷ್ಕಾರಿಂದಾಗಿಯೇ ಕೊಹ್ಲಿ ಔಟ್ ಆದರು ಎನ್ನುವ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದಲ್ಲದೇ ಅನುಷ್ಕಾರನ್ನು ವ್ಯಾಪಕ ಟ್ರಾಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅನುಷ್ಕಾ ಭಾರತಕ್ಕೆ ವಾಪಸ್ ಆಗಿದ್ದು, ನಿನ್ನೆ ಮುಂಬೈ ವಿಮಾನ ನಿಲ್ದಾಣಕ್ಕೆ ಅನುಷ್ಕಾ ಬಂದಿಳಿದಿದ್ದಾರೆ. ನಟಿ ಅನುಷ್ಕಾ ಆನಂದ್ ಎಲ್ ರಾಯ್ ಚಿತ್ರದಲ್ಲಿ ನಟಿಸುತ್ತಿದ್ದು. ಅದರ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಇದೇ ಕಾರಣಕ್ಕೆ ಅನುಷ್ಕಾ ವಾಪಸ್ ಆಗಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹಾಗೂ ಶಾರುಕ್ ಖಾನ್ ಜೊತೆ ಅನುಷ್ಕಾ ನಟಿಸಲಿದ್ದಾರೆ.

Comments are closed.