ಕರಾವಳಿ

ಆನೆಗುಡ್ಡೆಯಲ್ಲಿ ಸ್ಯಾಕ್ಸೋಫೋನ್ ವಾದನಕ್ಕೆ ತಲೆದೂಗಿದ ಟ್ರಾನ್ಸ್‌ಪೊರ್ಟ್ ಮಿನಿಸ್ಟರ್! (Video)

Pinterest LinkedIn Tumblr

ಕುಂದಾಪುರ: ಸದಾ ರಾಜಕೀಯ, ಹತ್ತಾರು ಸಮಸ್ಯೆಗಳು, ಜಂಜಾಟಗಳ ಒತ್ತಡದಲ್ಲಿಯೇ ರಾಜಕಾರಣಿಗಳು ಬ್ಯುಸಿಯಾಗಿರ್ತಾರೆ. ಸಚಿವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಜೀವನಕ್ಕೆ ಹತ್ತಿರವಾಗೋದು ಅಪರೂಪ. ಆದರೇ ಅಪರೂಪಕ್ಕೊಮ್ಮೆ ಅವರು ಸಾರ್ವಜನಿಕವಾಗಿ ಬೆರೆತು ಕಲೆ, ಸಂಸ್ಕ್ರತಿ ವಿಚಾರಕ್ಕೆ ಮಾರು ಹೋಗ್ತಾರೆ. ಅಂತಹದ್ದೊಂದು ಘಟನೆ ಕುಂದಾಪುರ ತಾಲೂಕಿನ ಆನೆಗುಡ್ಡೆಯಲ್ಲಿ ನಡೆಯಿತು.

ರಾಜ್ಯ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ದಂಪತಿ ಶನಿವಾರ ರಾತ್ರಿ ಆನೆಗುಡ್ಡೆ ಶ್ರೀ ವಿನಾಯಕ ದೇವಳಕ್ಕೆ ಭೇಟಿ ಕೊಟ್ಟರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಳದೊಳಗೆ ಪತ್ನಿಯೊಂದಿಗೆ ಕುಳಿತ ಅವರು ದೇವಸ್ಥಾನದಲ್ಲಿ ನುಡಿಸುವ ಸ್ಯಾಕ್ಸೋಫೋನ್ ವಾದನವನ್ನು ಕೇಳುವ ಇಂಗಿತ ವ್ಯಕ್ತಪಡಿಸಿದ್ರು.
ಈ ಸಂದರ್ಭ ಎರಡು ದೇವರ ಸ್ತುತಿಗಳನ್ನು ಸ್ಯಾಕ್ಸೋಫೋನ್ ಮೂಲಕ ನುಡಿಸಲಾಯಿತು. ದೇವರ ಸ್ತುತಿಯನ್ನು ಇಂಪಾದ ವಾದನದಲ್ಲಿ ಕೇಳಿ ದಂಪತಿಗಳಿಬ್ಬರು ತುಂಬಾನೇ ಖುಷಿಪಟ್ಟಿದ್ದು ಮಾತ್ರವಲ್ಲದೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು. ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಕಲೆ, ಸಂಸ್ಕ್ರತಿಯನ್ನು ನೆಚ್ಚಿಕೊಂಡು ತಾನು ಬೆಳೆದು ಬಂದಿರುವೆ. ರಾಜಕೀಯ ಕ್ಷೇತ್ರದಲ್ಲಿರುವಾಗ ಇಂತಹ ಕಲೆಗೆ ತಲೆದೂಗುವ ಆಸಕ್ತಿ ಇದ್ದರೇ ಮನಸ್ಸು ನಿರಾಳವೆನಿಸುತ್ತೆ ಎಂದ್ರು.

ನಿತ್ಯ ಸ್ಯಾಸೋಫೋನ್ ವಾದನ ದೇವಳದಲ್ಲಿ ಸಂಗೀತದ ಇಂಪು ನೀಡುವುದು ಆನೆಗುಡ್ಡೆ ವಿನಾಯಕನ ಆಲಯದಲ್ಲಿ ವಿಶೇಷ.

ವರದಿ-ಯೋಗೀಶ್ ಕುಂಭಾಸಿ

Comments are closed.