ರಾಷ್ಟ್ರೀಯ

ಮಾಜಿ ರಕ್ಷಣಾ ಸಚಿವ ಎ ಕೆ ಆ್ಯಂಟನಿ ಕಾರು ಚಾಲಕ ಆತ್ಮಹತ್ಯೆ

Pinterest LinkedIn Tumblr


ಹೊಸದಿಲ್ಲಿ: ಮಾಜಿ ರಕ್ಷಣಾ ಸಚಿವ ಎ ಕೆ ಆ್ಯಂಟನಿ ಅವರ ಕಾರು ಚಾಲಕ, ದಿಲ್ಲಿಯ ಐಶಾರಾಮಿ ಲುಟೆನ್ಸ್‌ ಪ್ರದೇಶದಲ್ಲಿನ ಆ್ಯಂಟನಿ ಅವರ ಅಧಿಕೃತ ನಿವಾಸದ ಕೆಲಸಗಾರರ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ.

ಜಂತರ್‌ ಮಂತರ್‌ ರಸ್ತೆಯಲ್ಲಿನ ಕಾಂಗ್ರೆಸ್‌ ನಾಯಕನ ಅಧಿಕೃತ ನಿವಾಸದ ಕೆಲಸಗಾರರ ಕ್ವಾರ್ಟರ್ಸ್‌ನಲ್ಲಿ 35ರ ಹರೆಯದ ಕಾರು ಚಾಲಕ ಸಂಜಯ್‌ ಸಿಂಗ್‌ನ ಶವ ನೇಣಿನಲ್ಲಿ ತೂಗಾಡುತ್ತಿದ್ದುದು ಕಂಡು ಬಂದಿದೆ.

ಆತ್ಮಹತ್ಯೆಗೆ ಸಂಬಂಧಿಸಿ ಯಾವುದೇ ಡೆತ್‌ ನೋಟ್‌ ಕಂಡು ಬಂದಿಲ್ಲ, ಹಾಗೆಂದು ಕೊಲೆ ಸಾಧ್ಯತೆಯನ್ನು ಪೊಲೀಸರು ಶಂಕಿಸಿಲ್ಲ; ಸಂಜಯ್‌ ಸಿಂಗ್‌ ಯಾಕಾಗಿ ಈ ಅತಿರೇಕದ ಕೃತ್ಯ ಎಸಗಿದ ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

-ಉದಯವಾಣಿ

Comments are closed.