ರಾಷ್ಟ್ರೀಯ

ಭಾರತಕ್ಕೆ 10 ಸಾವಿರ ಸೀಪ್ಲೇನ್‌ಗಳು: ಗಡ್ಕರಿ

Pinterest LinkedIn Tumblr


ಹೊಸದಿಲ್ಲಿ: ಜಲ ಮತ್ತು ವಾಯುಯಾನ ಸಾಮರ್ಥ್ಯ‌ ಹೊಂದಿರುವ 10 ಸಾವಿರ ಸಾಗರ ವಿಮಾನಗಳನ್ನು(ಸೀಪ್ಲೇನ್‌) ಹೊಂದುವ ಸಾಮರ್ಥ್ಯ‌ ಭಾರತಕ್ಕಿದೆ. ಈ ಸೀಪ್ಲೇನ್‌ಗಳು, ಪಾಡ್‌ ಟ್ಯಾಕ್ಸಿಗಳು, ಎಲೆಕ್ಟ್ರಿಕ್‌ ಹೈವೇ ಮತ್ತಿತರ ಅಂಶಗಳು ಮೋದಿ ಸರಕಾರದ ಕಾರ್ಯಸೂಚಿಯಲ್ಲಿವೆ. ಇವು ಭಾರತದ ಮೂಲಸೌಕರ್ಯದ ಮುಖವನ್ನೇ ಬದಲಿಸಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

16 ಲಕ್ಷ ಕೋಟಿ ರೂ.ಗಳ ಸಾಗರಮಾಲಾ ಮತ್ತು 7 ಲಕ್ಷ ಕೋಟಿ ರೂ.ಗಳ ಭಾರತಮಾಲಾ ಯೋಜನೆಗಳು ಭಾರತದ ಪ್ರಗತಿಗೆ ಪೂರಕವಾಗಲಿವೆ ಎಂದು ಗಡ್ಕರಿ ಹೇಳಿದ್ದಾರೆ.

Comments are closed.