ಕ್ರೀಡೆ

ದ್ರಾವಿಡ್ ರನ್ನು ಭೇಟಿಯಾದ ಪಾಕ್ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

Pinterest LinkedIn Tumblr

ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ ಜಂಟಲ್ ಮ್ಯಾನ್ ಆಫ್ ದಿ ಕ್ರಿಕೆಟ್ ಎಂದೇ ಜನಪ್ರಿಯ. ಅವರಿಗೆ ಗೌರವ ಕೊಡುವವರು ಭಾರತೀಯರು ಮಾತ್ರವಲ್ಲ, ಜಾಗತಿಕವಾಗಿ ಆದರಿಸಲ್ಪಟ್ಟ ಕ್ರಿಕೆಟಿಗ.

ಇಂತಹಾ ದ್ರಾವಿಡ್ ಎಂದರೆ ಪಾಕ್ ಕ್ರಿಕೆಟಿಗರೂ ತಲೆಬಾಗುತ್ತಾರೆ. ಇದೀಗ ಮತ್ತೊಮ್ಮೆ ಸಾಬೀತಾಗಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ವಿಮಾನವೇರಿದ್ದ ಪಾಕ್ ಕ್ರಿಕೆಟಿಗರು ವಿಮಾನದಲ್ಲಿ ರಾಹುಲ್ ದ್ರಾವಿಡ್ ಭೇಟಿಯಾಗಿದ್ದಾರೆ.

ದ್ರಾವಿಡ್ ಜತೆ ಸೆಲ್ಫೀ ತೆಗೆದುಕೊಂಡ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ‘ಕ್ರಿಕೆಟ್ ನ ವಾಲ್ ಎಂದೇ ಆದರಿಸುವ ರಾಹುಲ್ ದ್ರಾವಿಡ್ ರನ್ನು ಭೇಟಿಯಾಗಿದ್ದೇನೆ. ರಾಹುಲ್ ಅಣ್ಣಾ..ಅದ್ಭುತ ವ್ಯಕ್ತಿ. ಅವರ ಜತೆ ಉತ್ತಮ ಮನುಷ್ಯ, ಯಾವಾಗೆಲ್ಲಾ ಕ್ರಿಕೆಟ್ ಬಗ್ಗೆ ಮಾತನಾಡಲು, ಸಹಾಯ ಮಾಡಲು ರೆಡಿಯಾಗಿರುತ್ತಾರೆ. ಅವರ ಜತೆ ಆಡುವುದು ಮತ್ತು ಭೇಟಿಯಾಗುವುದೇ ಗೌರವ’ ಎಂದು ಹಫೀಜ್ ಹೆಮ್ಮೆಯಿಂದ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Comments are closed.