ರಾಷ್ಟ್ರೀಯ

ಅಭಿಮಾನಿಗಳ ಆಶಯದಂತೆ ರಾಜಕೀಯಕ್ಕೆ ರಜನಿ ಎಂಟ್ರಿ; ಸ್ವಂತ ಪಕ್ಷ ಸ್ಥಾಪನೆ; 324 ಕ್ಷೇತ್ರಗಳಲ್ಲೂ ರಜನಿ ಪಕ್ಷವ ಸ್ಪರ್ಧೆ

Pinterest LinkedIn Tumblr

ಚೆನೈ: ಅಭಿಮಾನಿಗಳ ಬಹು ದಿನಗಳ ಆಶಯದಂತೆಯೇ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಧುಮುಕಿದ್ದು, ತಮ್ಮದೇ ಸ್ವಂತ ಪಕ್ಷ ಸ್ಥಾಪನೆ ಮಾಡುವುದಾಗಿ ರಜನಿಕಾಂತ್ ಘೋಷಣೆ ಮಾಡಿದ್ದಾರೆ.

ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಭೇಟಿ ಕಾರ್ಯಕ್ರಮದ ಅಂತಿಮ ದಿನವಾದ ಇಂದು ರಜನಿಕಾಂತ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ತಮ್ಮ ನೂತನ ಪಕ್ಷ ಎಲ್ಲ 324 ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಇನ್ನು ಪಕ್ಷದ ಹೆಸರು ಮತ್ತು ಪಕ್ಷದ ಚಿನ್ಹೆ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ರಜನಿ ಸ್ಪಷ್ಟಪಡಿಸಿದರು.

Comments are closed.