ನಲಾಸೋಪಾರ : ಬಂಟರ ಸಂಘ ಮುಂಬಯಿ ಯ ಪ್ರಾದೇಶಿಕ ಸಮಿತಿಗಳ ಮೂಲಕ ಸಂಘ ಸದಸ್ಯರ ಸಂಖ್ಯೆ ಇನ್ನೂ ನಮ್ಮ ನಿರೀಕ್ಷೆಯನ್ನು ಮೀರಲಿ. ಪ್ರಾದೇಶಿಕ ಸಮಿತಿಗೆ ನಮ್ಮ ಸಹಾಯ, ಪ್ರೊತ್ಸಾಹ ಸದಾ ಇದೆ. ಈ ಪರಿಸರದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆಮಾಡುವುದು ಕೂಡಾ ನಮ್ಮ ಕನಸಾಗಿದ್ದು ಅದು ಬೇಗನೆ ನೆನಸಾಗಲಿ. ಎಲ್ಲಾ ಒಂಬತ್ತು ಪ್ರಾದೇಶಿಕ ಸಮಿತಿಗಳು ನಮ್ಮ ಸಂಘದ ಆಧಾರ ಸ್ತಂಭಗಳಂತೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪದ್ಮನಾಭ ಎಸ್. ಪಯ್ಯಡೆಯವರು ನುಡಿದರು.
ಡಿ. 22ರಂದು ನಲಾಸೋಪಾರ ಪಶ್ಚಿಮದ ಗ್ಯಾಲಕ್ಷಿ ಪಾರ್ಟಿ ಹಾಲ್ ನಲ್ಲಿ ಜರಗಿದ ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಬಂಟರ ಸಂಘ ಮುಂಬಯಿ ಯ ಅಧ್ಯಕ್ಷನಾಗಿ ನಾನು ಜವಾಬ್ಧಾರಿಯನ್ನು ವಹಿಸಿದ್ದು ನನಗೆ ಸಹಕರಿಸುತ್ತಿರುವ ಎಲ್ಲಾ ಪ್ರಾದೇಶಿಕ ಸಮಿತಿಗಳಿಗೆ ಅಭಾರಿಯಾಗಿರುವೆನು. ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾದ ಜಯಂತ್ ಆರ್ ಪಕ್ಕಳ ಅವರು ತನ್ನ ನೂತನ ಸಮಿತಿ ಹಾಗೂ ನಿಮ್ಮೆಲ್ಲರ ಸಹಾಯದೊಂದಿಗೆ ಈಗಾಗಲೇ ನುಡಿದಂತಹ ಹೆಚ್ಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂದೇಹವಿಲ್ಲ ಎನ್ನುತ್ತಾ ಅಭಿನಂದಿಸಿದರು. ಅಲ್ಲದೆ ನಿರ್ಗಮನ ಕಾರ್ಯಾಧ್ಯಕ್ಷರಾದ ಶಶಿಧರ ಶೆಟ್ಟಿಯ ವರ ಕಾರ್ಯವನ್ನು ಮೆಚ್ಚಿ ಮಾತನಾಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಬಂಟ್ಸ್ ಫೆಡರೇಷನಿನ ಉಪಾಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ಮಾತನಾಡುತ್ತಾ ಮಾಜಿ ಕಾರ್ಯಾಧ್ಯಕ್ಷ ದಿ. ಕರ್ನಿರೆ ಶ್ರೀಧರ ಶೆಟ್ಟಿಯವರ ಯೋಗದಾನವನ್ನು ನೆನಪಿಸಿಕೊಂಡರು. ನೂತನ ಕಾರ್ಯಾಧ್ಯಕ್ಷ ಜಯಂತ್ ಆರ್ ಪಕ್ಕಳ ಇವರು ಅನುಭವೀ ಸಮಾಜ ಸೇವಕರಾಗಿದ್ದು ಇವರ ಎಲ್ಲಾ ಕಾರ್ಯಗಳಿಗೆ ಸ್ಪಂದಿಸುವ ಜನರು ಇವರೊಂದಿಗೆ ಇದ್ದಾರೆ ಎನ್ನಲು ಸಂತೋಷವಾಗುತ್ತಿದೆ. ಮಾಜಿ ಕಾರ್ಯಾಧ್ಯಕ್ಷರಾದ ಶಶಿಧರ ಶೆಟ್ಟಿಯವರಿಗೆ ಇಂದು ಮಾಡಿದ ಸನ್ಮಾನವು ಅರ್ಥಪೂರ್ಣವಾಗಿದೆ. ಭಕ್ತರಿಗೆ ದೇವರ ಅಗತ್ಯವಿದ್ದಂತೆ ಆ ಸ್ಥಾನದಲ್ಲಿರುವ ಬಂಟರ ಸಂಘಕ್ಕೆ ಎಲ್ಲರೂ ಬರಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜ ಸೇವೆ ಮಾಡೋಣ ಎಂದರು.
ಸ್ಥಳೀಯ ಮಹಾನಗರ ಪಾಲಿಕೆಯ ಉಪಮೇಯರ್ ಉಮೇಶ್ ಡಿ. ನಾಯಕ್ ಈ ಸಂಧರ್ಭದಲ್ಲಿ ಮಾತನಾಡಿ ತನ್ನ ಸಂಪೂರ್ಣ ಪ್ರೋತ್ಸಾಹವನ್ನು ವ್ಯಕ್ತಪಡಿಸುತ್ತಾ ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಟ್ರಸ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ ಯವರು ಮಾತನಾಡುತ್ತಾ ಐಕಳ ಹರೀಶ್ ಶೆಟ್ಟಿಯವರ ಪ್ರಯತ್ನದಿಂದ ಇಲ್ಲಿ ಪ್ರಾದೇಶಿಕ ಸಮಿತಿಯ ಸ್ಥಾಪನೆಗೊಂಡಿದೆ. ಜಯಂತ್ ಆರ್ ಪಕ್ಕಳ ರು ಈ ಪ್ರಾದೇಶಿಕ ಸಮಿತಿಯ ನಾಲ್ಕನೆಯ ಕಾರ್ಯಾಧ್ಯಕ್ಷರಾಗಿದ್ದು ನಾವೆಲ್ಲರೂ ಇವರಿಗೆ ಪ್ರೋತ್ಸಾಹಿಸಬೇಕಾಗಿದೆ. ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಶಕ್ತಿಯಾಗಿದ್ದು, ಪಶ್ಚಿಮ ವಿಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ನಮ್ಮ ಗುರು ಆದಷ್ಟು ಬೇಗನೇ ನೆರವೇರಲಿ ಎಂದರು.
ವಿ.ಕೆ. ಗ್ರೂಪ್ ಕಂಪೆನಿಗಳ ಮಾಲಕ ಕೆ. ಎಂ. ಶೆಟ್ಟಿ ಯವರು ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.
ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪದ್ಮನಾಭ ಎಸ್. ಪಯ್ಯಡೆಯವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಸನ್ಮಾನಿಸಿದ್ದು ಕಲಾವಿದ ವಿಜಯ ಕುಮಾರ್ ಶೆಟ್ಟಿಯವರು ಸನ್ಮಾನ ಪತ್ರವನ್ನು ವಾಚಿಸಿದರು. ನಿರ್ಗಮನ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಯವರು ನೂತನ ಕಾರ್ಯಾಧ್ಯಕ್ಷ ಜಯಂತ್ ಆರ್ ಪಕ್ಕಳ ದಂಪತಿಯನ್ನು ಸ್ವಾಗತಿಸಿ ಸನ್ಮಾನಿಸಿದರು. ಅದೇ ರೀತಿ ನೂತನ ಸಮಿತಿಯ ಎಲ್ಲ ಸದಸ್ಯರನ್ನು ಮತ್ತು ನಿರ್ಗಮನ ಸಮಿತಿಯ ಎಲ್ಲ ಸದಸ್ಯರನ್ನು ಗೌರವಿಸಿ ಅಭಿನಂದಿಸಲಾಯಿತು.
ಪ್ರಾರಂಭದಲ್ಲಿ ಅತಿಥಿಗಳು ಹಾಗೂ ಪದಾಧಿಕಾರಿಗಳ್ಲು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಲೀಲಾವತಿ ಆಳ್ವ ಪ್ರಾರ್ಥನೆಗೈದರು.
ವೇದಿಕೆಯಲ್ಲಿ ಬಂಟರ ಸಂಘದ ಉಪಾಧಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಐಕಳ ಗುಣಪಾಲ ಶೆಟ್ಟಿ, ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ. ಪ್ರಭಾಕರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ ಕೆ. ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಉಪಕಾರ್ಯಾಧ್ಯಕ್ಷ ಕೆ. ಶಂಕರ ಆಳ್ವ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ವಿಜಯ ಎಂ ಶೆಟ್ಟಿ, ಜತೆ ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಕರ್ಯಕ್ರಮ ಸಂಯೋಜಕ ಹರೀಶ್ ಪಿ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ, ನಾಲಾಸೋಪಾರದ ನಗರಸೇವಕ ಪ್ರವೀಣ್ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಶಂಕರ್ ಆಳ್ವ, ರಘುರಾಮ ರೈ, ಕೋಶಾಧಿಕಾರಿ ಜಗನ್ನಾಥ ಡಿ. ಶೆಟ್ಟಿ, ಕಾರ್ಯಕ್ರಮ ಸಮನ್ವಯಕ ಮಂಜುಳಾ ಎ. ಶೆಟ್ಟಿ, ಶಕುಂತಳಾಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಶೋಕ ಪಕ್ಕಳ ನೆರವೇರಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್



Comments are closed.