ರಾಷ್ಟ್ರೀಯ

ಪತ್ನಿಯ ಕಾಲುವೆಗೆ ತಳ್ಳಲು ಯತ್ನಿಸಿದಾತ ನೀರು ಪಾಲು

Pinterest LinkedIn Tumblr


ಫಿರೋಜ್‌ಫುರ: ಪತ್ನಿಯನ್ನು ಕಾಲುವೆಗೆ ತಳ್ಳಿಬಿಟ್ಟು ಸಾಯಿಸಲು ಯೋಜನೆ ರೂಪಿಸಿದ್ದ ಪತಿಯೇ ನೀರಿಗೆ ಬಿದ್ದು ಕೋಚ್ಚಿಕೊಂಡು ಹೋಗಿರುವ ಪ್ರಕರಣ ಮಲ್ಲನ್‌ವಾಲ ಗ್ರಾಮದಲ್ಲಿ ನಡೆದಿದೆ.

ನೀರಿನಲ್ಲಿ ಕೊಚ್ಚಿಹೋಗಬೇಕಿದ್ದ ಪತ್ನಿ ಅದೃಷ್ಟವಶಾತ್‌ ಪಾರಾಗಿದ್ದು, ಕೊಚ್ಚಿಕೊಂಡು ಹೋಗಿರುವ ಆಕೆಯ ಪತಿಯ ಶವ ಇನ್ನೂ ಸಿಕ್ಕಿಲ್ಲ. ಪತಿಯನ್ನು ಮುಗಿಸಿ ಬಿಡುವ ತಂತ್ರದಲ್ಲಿ ಭಾಗಿಯಾಗಿದ್ದ ಪತಿಯ ಸೋದರ ನಾಪತ್ತೆಯಾಗಿದ್ದಾನೆ.

ಅನ್ವರ್‌ ಮಸಿಹ್‌ ಎಂಬಾತ ಪತ್ನಿ ಕೋಮಲ್‌ ಅವರನ್ನು ಸಂಜೆ ವಾಕಿಂಗ್‌ಗೆಂದು ಕರೆದುಕೊಂಡು ಹೋಗಿದ್ದ. ಅನ್ವರ್‌ನ ತಮ್ಮ ನಚ್ಚತ್ತರ್‌ ಜತೆಯಾಗಿದ್ದ. ನಚ್ಚರ್‌ ನನ್ನನ್ನು ನೀರಿಗೆ ತಳ್ಳಿದ್ದು, ಅಲ್ಲೇ ಬೆಳೆದು ನಿಂತಿದ್ದ ಕಳೆ ಗಿಡವನ್ನು ಹಿಡಿದಿದ್ದೆ. ಇದನ್ನು ನೋಡಿದ ಪತಿ ಅನ್ವರ್‌ ನೀರಿಗೆ ಹಾರಿ ತನ್ನನ್ನು ತಳ್ಳಿದ್ದಾನೆ, ಆಗ ಬಲವಾದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಕೂಗು ಕೇಳಿ ಸ್ಥಳೀಯರು ಬಂದಾಗ ನಚ್ಚರನ್‌ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.

ಕೋಮಲ್‌ 2010 ರಲ್ಲಿ ಅನ್ವರ್‌ನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

Comments are closed.