ಮನೋರಂಜನೆ

ಪ್ರೀತಿಸಿದಾತನನ್ನು ಮದ್ವೆಯಾಗಲು ಮುಂದಾಗಿರುವ ಬಿಗ್ ಬಾಸ್ ಖ್ಯಾತಿಯ ಸುಂದರಿ ಸಂಜನಾ

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಸೀಸನ್-4 ಸ್ಪರ್ಧಿಗಳಾಗಿದ್ದ ಭುವನ್ ಮತ್ತು ಸಂಜನಾ ನಡುವೆ ಲವ್ವಿಡವ್ವಿ ನಡೆಯುತ್ತಿದೆ, ಇಬ್ಬರು ಜೊತೆಯಾಗಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಅಂತೆ ಕಂತೆಗಳಿಗೆ ಫೈನಲ್ ಫುಲ್‍ಸ್ಟಾಪ್ ಬಿದ್ದಿದೆ.

ಬಿಗ್ ಬಾಸ್ ಖ್ಯಾತಿಯ ಕಾಂಟ್ರವರ್ಸಿ ಕ್ಯೂಟ್ ಗರ್ಲ್ ಸಂಜನಾ ಚಿದಾನಂದ್ ತಮ್ಮ ಗೆಳೆಯ ಗೌರವ್ ರಾಯ್ ಜೊತೆ ಅತಿ ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಗೌರವ್ ರಾಯ್ ಪಶ್ಚಿಮ ಬಂಗಾಲ ಮೂಲದವರಾಗಿದ್ದು, ಖಾಸಗಿ ವಾಹಿನಿಯೊಂದರಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.

ಗೌರವ್ ಹಾಗೂ ಸಂಜನಾ ಇಬ್ಬರು ಒಂದು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರ ಮನೆಯಲ್ಲಿ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ವರ್ಷ ನಿಶ್ಚಿತಾರ್ಥ ಮಾಡಿಕೊಂಡು, 2019ರಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ.

Comments are closed.