
ಹೊಸದಿಲ್ಲಿ: ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮಿತ್ ರಾಮ್ ರಹೀಂನ ದತ್ತು ಪುತ್ರಿ ಹನಿಪ್ರೀತ್ ಇತ್ತೀಚೆಗೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು ವಕೀಲರನ್ನು ನೇಮಿಸಿಕೊಳ್ಳಲು ತನ್ನ ಬಳಿ ಹಣವಿಲ್ಲ ಎಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಂನ ಬಂಧನದ ಸಂದರ್ಭದಲ್ಲಿ ಗಲಭೆಗೆ ಕಾರಣಳಾದ ಈತನ ದತ್ತು ಪುತ್ರಿ ಹನಿಪ್ರೀತ್ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿದೆ. ಅಲ್ಲದೇ ಪ್ರಕರಣದ ತನಿಖೆ ಸಂದರ್ಭದಲ್ಲಿ ಎಸ್‌ಐಟಿ ಹನಿಪ್ರೀತ್‌ನ ಬ್ಯಾಂಕ್ ಖಾತೆಗಳನ್ನು ಸ್ಥಂಭನಗೊಳಿಸಿತ್ತು. ಪರಿಣಾಮ ಹನಿಪ್ರೀತ್ ಈಗ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ.
ಎಸ್‌ಐಟಿ ತನ್ನ ಮೂರು ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಿದೆ. ಹೀಗಾಗಿ ವಕೀಲರನ್ನು ನೇಮಿಸಲು ನಮ್ಮ ಬಳಿ ಹಣವಿಲ್ಲ, ಹಣ ಡ್ರಾ ಮಾಡಲು ತನಗೆ ಅವಕಾಶ ನೀಡಬೇಕು ಎಂದವರು ಬೇಡಿಕೆಯಿರಿಸಿದ್ದಾರೆ.
ಪಂಚಕುಲ ಎಸ್‌ಐಟಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಕೋರ್ಟ್‌ನಲ್ಲಿ ವಿಚಾರಣೆ ಶುರುವಾಗಲಿದೆ.
Comments are closed.