ರಾಷ್ಟ್ರೀಯ

ಆಸ್ಪತ್ರೆಯಲ್ಲಿ ಅಸಹಾಯಕಳಾಗಿ ಮಲಗಿದ್ದ ಬಾಲಕಿಯ ಮೇಲೆ ಇಬ್ಬರು ಆಸ್ಪತ್ರೆಯ ಸಿಬ್ಬಂದಿಗಳಿಂದ ಅತ್ಯಾಚಾರಕ್ಕೆ ಯತ್ನ !

Pinterest LinkedIn Tumblr

ಗುರುಗ್ರಾಮ: ತಂಪು ಪಾನೀಯವೆಂದು ಪೆಸ್ಟಿಸೈಡ್ ಕುಡಿದು ಅರೆಪ್ರಜ್ಞೆಯನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದ 16 ವರ್ಷದ ಬಾಲಕಿಯ ಮೇಲೆ ಇಬ್ಬರು ಆಸ್ಪತ್ರೆಯ ಸಿಬ್ಬಂದಿ ಗ್ಯಾಂಗ್‌ರೇಪ್ ಎಸಗಿದ ಘಟನೆ ವರದಿಯಾಗಿದೆ.

ಆಸ್ಪತ್ರೆಯ ಬೆಡ್ ಮೇಲೆ ಅಸಹಾಯಕಳಾಗಿ ಮಲಗಿದ್ದ ಬಾಲಕಿಯ ಅನಾರೋಗ್ಯವನ್ನು ಗಮನಿಸದೆ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿಯ ಕೂಗು ಕೇಳಿದ ಆಸ್ಪತ್ರೆಯಲ್ಲಿರುವ ಪೋಷಕರು ಆಗಮಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿ ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ದೂರು ದಾಖಲಾಗಿದೆ.

ಪೋಷಕರ ಪ್ರಕಾರ ಪುತ್ರಿ 12ನೇ ತರಗತಿಯಲ್ಲಿ ಓದುತ್ತಿದ್ದು ಪೆಸ್ಟಿಸೈಡ್‌ನ್ನು ತಂಪು ಪಾನೀಯವೆಂದು ಕುಡಿದಿದ್ದಳು. ಇದನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.