
ತಿರುವನಂತಪುರಂ: ಪ್ರತಿ ವರ್ಷದಂತೆ ಈ ವರ್ಷವೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಟ್ರೋಲ್ ಪೇಜ್‌ಗಳು ಅಯ್ಯಪ್ಪ ಸ್ವಾಮಿ ಹೆಸರಿನಡಿ ಟ್ರೋಲ್ ಮಾಡಿ ಇದೀಗ ಪೇಚಿಗೆ ಸಿಲುಕಿದೆ.
ಟ್ರೋಲ್ ರಿಪಬ್ಲಿಕ್ ಎಂಬ ಫೇಸ್‌ಬುಕ್ ಪೇಜ್ ಕೆಲ ದಿನಗಳ ಹಿಂದೆ, ಅಯ್ಯಪ್ಪ ದೇವರು ಕಣ್ಣು ತೆರೆದು ಕುಳಿತುಕೊಳ್ಳುವಂತೆ ಮಲಯಾಳಂ ಚಿತ್ರನಟ ಜಗತಿ ಶ್ರೀಕುಮಾರ್ ಅವರ ಚಿತ್ರ ಬಳಸಿ ಟ್ರೋಲ್ ಮಾಡಿತ್ತು. ಈ ಟ್ರೋಲ್ ಚಿತ್ರ ಭಾರೀ ವೈರಲ್ ಆಗಿದ್ದು ಇದೀಗ ಕೇರಳ ಸೈಬರ್ ಕ್ರೈಂ ಪೊಲೀಸರು ಟ್ರೋಲ್ ರಿಪಬ್ಲಿಕ್ ಪೇಜ್ ಅಡ್ಮಿನ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಹೊಸದಾಗಿ ಬಂದಿರುವ ಅಯ್ಯಪ್ಪ ದೇವಸ್ಥಾನದ ಮಂಡಳಿ ಪ್ರತಿನಿತ್ಯ ದೇಗುಲ ಮುಚ್ಚುವ ಸಮಯದಲ್ಲೂ ಬದಲಾವಣೆ ತಂದಿದೆ. ಅಲ್ಲದೇ ದಿನದ ಅಂತ್ಯಕ್ಕೆ ಹರಿವರಾಸನಂ ಹಾಡು ಹಾಡಲಾಗುತ್ತದೆ. ಇದನ್ನೇ ಟ್ರೋಲ್ ಮಾಡಿದ ಪೇಜ್ ಅಡ್ಮಿನ್, ಜಗತಿ ಅಭಿನಯದ ಮೀಸೆ ಮಾದವನ್ ಮಲಯಾಳಂ ಚಿತ್ರದ ಒಂದು ದೃಶ್ಯದಲ್ಲಿ ಕಣ್ಣು ಮುಚ್ಚದಿರುಲು ಕಡ್ಡಿಗಳನ್ನು ಇಟ್ಟುಕೊಂಡಿದ್ದರು. ಇದೇ ಚಿತ್ರವನ್ನು ಕ್ರಾಪ್ ಮಾಡಿ ಸ್ವಾಮಿ ಅಯ್ಯಪ್ಪರ ಚಿತ್ರಕ್ಕೆ ಪೇಸ್ಟ್ ಮಾಡಿದ್ದಾರೆ. ಬಳಿಕ ಅದರ ಮೇಲೆ ‘ದರ್ಶನ ಸಮಯ ಹೆಚ್ಚಿಸಲಾಗಿದೆ, ಹರಿವರಾಸನಂ ಹಾಡ ಎಷ್ಟು ಹೊತ್ತಿಗೆ ಮೊಳಗುತ್ತದೋ’ ಎಂದಯ ವ್ಯಂಗ್ಯವಾಗಿ ಬರೆದಿದ್ದಾರೆ.
ಈ ಟ್ರೋಲ್ ವೈರಲ್ ಆದ ಕೂಡಲೇ ಸೈಬರ್ ಕ್ರೈಂ ಪೊಲೀಸರು ಅಡ್ಮಿನ್‌ಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಧಾರ್ಮಿಕ ಭಾವನೆಗಳನ್ನು ಕೆದಕುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ ಪೇಜ್ ಅಡ್ಮಿನ್ ಮಾತ್ರಾ ತಾವು ಯಾರ ಭಾವನೆಗಳನ್ನು ನಿಂದಿಸಲು ಈ ರೀತಿ ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ಇವರಿಗೆ ಬೆಂಬಲವಾಗಿ ಮತ್ತೊಂದು ಟ್ರೋಲ್ ಪೇಜ್ ಐಸಿಯು (ಇಂಟರ್‌ನ್ಯಾಷನಲ್ ಚಾಲು ಯೂನಿಯನ್) ಇವರ ಅದೇ ಚಿತ್ರವನ್ನು ಹಾಕಿ ಬೆಂಬಲ ಸೂಚಿಸಿದೆ.
Comments are closed.