
ಹೊಸದಿಲ್ಲಿ: ಅಮೆರಿಕದ ಸ್ಟಾರ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಇದೀಗ ತಮ್ಮ ಪ್ರಿಯಕರನ ಜತೆ ಮದುವೆಯಾಗಿದ್ದಾರೆ.
ಗರ್ಭಿಣಿಯಾಗಿದ್ದಾಗಲೇ ಚಿತ್ರಗಳನ್ನು ಹಂಚಿಕೊಂಡಿದ್ದಸೆರೆನಾ ಕಳೆದ ಸೆಪ್ಟೆಂಬರ್ 01ರಂದು ಹೆಣ್ಣು ಮಗು ಒಲಿಂಪಿಯಾ ಓಹಾನಿಯನ್ ಜೂನಿಯರ್‌ಗೆ ಜನ್ಮ ನೀಡಿದ್ದರು. ಈಗ ಪ್ರಿಯಕರ ರೆಡಿಟ್ ಸಹ-ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್‌ರನ್ನು ಅಧಿಕೃತವಾಗಿ ವರಿಸಿಕೊಂಡಿದ್ದಾರೆ.
ನ್ಯೂ ಓರ್ಲಿಯನ್ಸ್‌ನ ಕಂಟೆಂಪರರಿ ಆರ್ಟ್ಸ್ ಸೆಂಟರ್‌ನಲ್ಲಿ ಸೆರೆನಾ-ಅಲೆಕ್ಸಿಸ್ ವಿವಾಹ ನೆರವೇರಿದೆ. ಶುಕ್ರವಾರ ರಾತ್ರಿ ಈ ಸಂಬಂಧ ಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
36ರ ಹರೆಯದ ಸೆರೆನಾ, ಟೆನಿಸ್ ಜಗತ್ತಿನ ಸರ್ವಕಾಲಿನ ಶ್ರೇಷ್ಠ ಆಟಗಾರ್ತಿಯರಲ್ಲಿ ಗುರುತಿಸಿಕೊಂಡಿದ್ದು, 23 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
ಅಂದ ಹಾಗೆ ಕಳೆದ ಡಿಸೆಂಬರ್‌ನಲ್ಲಿ ಸೆರೆನಾ-ಅಲೆಕ್ಸಿಸ್ ನಿಶ್ಚಿತಾರ್ಥ ನಡೆದಿತ್ತು. ಜನವರಿ ತಿಂಗಳಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ಟೆನಿಸ್ ಲೋಕದಿಂದ ದೂರವಿದ್ದರು.
ಹಾಗೆಯೇ ಮುಂದಿನ ವರ್ಷಾರಂಭದಲ್ಲಿ ಮತ್ತೆ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುವುದಾಗಿ ಸೆರೆನಾ ಘೋಷಿಸಿದ್ದಾರೆ.
Comments are closed.