ಮನೋರಂಜನೆ

ಕಿಚ್ಚ ಸುದೀಪ್‌ ಅವರ ಯಾವ ಸಿನಿಮಾ ನೋಡಿ ಪಾಕಿಸ್ತಾನಿಗಳು ಅಭಿಮಾನಿಗಳಾಗಿದ್ದು ಗೊತ್ತೇ….?

Pinterest LinkedIn Tumblr

ದಕ್ಷಿಣ ಭಾರತದಲ್ಲಿ ಬೃಹತ್‌ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್‌ ನಟ ಸುದೀಪ್‌ ಅವರಿಗೆ ವಿದೇಶಗಳಲ್ಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಇದೀಗ ಪಾಕಿಸ್ತಾನಿಗಳೂ ಕಿಚ್ಚ ಸುದೀಪ್‌ಗೆ ಫಿದಾ ಆಗಿದ್ದಾರೆ.

ಸುದೀಪ್‌ ಹಾಗೂ ನಿತ್ಯಾ ಮೆನನ್‌ ಜೋಡಿಯಾಗಿ ಅಭಿನಯಿಸಿರುವ ಕೋಟಿಗೊಬ್ಬ-2 ಸಿನಿಮಾದ ಹಿಂದಿ ರಿಮೇಕ್‌ ಗೋಲಿಮಾರ್‌ ಸಿನಿಮಾ ನೋಡಿ ಬಾಂಗ್ಲಾ ಹಾಗೂ ಪಾಕಿಸ್ತಾನ ದೇಶದವರು ಮೆಚ್ಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾಕ್ಕೆ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದು ಉತ್ತಮ ಸಿನಿಮಾ, ನಿಜವಾಗಲೂ ಇಷ್ಟವಾಗುತ್ತದೆ ಎಂದು ಬಾಂಗ್ಲಾ ದೇಶದ ಅಭಿಮಾನಿಗಳು ಹೇಳಿದರೆ, ಪಾಕಿಸ್ತಾನದ ಅಭಿಮಾನಿಗಳು ನಾವು ನಿಮ್ಮ ದೊಡ್ಡ ಅಭಿಮಾನಿಗಳು ಎಂದು ಕಾಮೆಂಟ್‌ ಮಾಡಿದ್ದಾರೆ.

Comments are closed.