
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 170 ಭಯೋತ್ಪದಾಕರನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದಾರೆ.
ಇನ್ನು ಕಣಿವೆ ರಾಜ್ಯದಲ್ಲಿ ಉಗ್ರ ಸಂಘಟನೆಗಳಿಗೆ ಯುವಕರು ಹೆಚ್ಚಾಗಿ ಸೇರಿಕೊಳ್ಳುತ್ತಿದ್ದಾರೆ. ಇದರಲ್ಲಿ ದಕ್ಷಿಣ ಕಾಶ್ಮೀರ ಯುವಕರೇ ಹೆಚ್ಚಾಗಿದ್ದು ಇಲ್ಲಿಯವರೆಗೂ 90 ಯುವಕರು ಹಿಜ್ಬುಲ್ ಮುಜಾಯಿದ್ದೀನ್, ಲಷ್ಕರ್ ಇ ತೊಯ್ಬಾ ಮತ್ತು ಜೈಶ್ ಇ-ಮೊಹಮ್ಮದ್ ಸಂಘಟನೆಗಳಿಗೆ ಸೇರಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವಕರನ್ನು ಉಗ್ರ ಸಂಘಟನೆಗಳಿಗೆ ಸೇರಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಅನಂತನಾಗ್, ಪುಲ್ವಾಮಾ, ಕುಲ್ಗಾಮ್ ಮತ್ತು ಸೋಪಿಯಾನ ಜಿಲ್ಲೆಗಳಿಂದ ಯುವಕರು ಉಗ್ರ ಸಂಘಟನೆಗಳಿಗೆ ಸೇರಿಕೊಳ್ಳುತ್ತಿದ್ದಾರೆ.
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಗಲಭೆ ಮತ್ತು ರಾಜ್ಯದಲ್ಲಿ ನಡೆ ವಿವಿಧ ಉಗ್ರ ದಾಳಿ ಸಂದರ್ಭದಲ್ಲಿ ಸುಮಾರು 94 ನಾಗರೀಕರು ಮೃತಪಟ್ಟಿದ್ದಾರೆ. 2015ರಲ್ಲಿ 53 ಯುವಕರು ಉಗ್ರ ಸಂಘಟನೆಗೆ ಸೇರಿದ್ದರು. 2016ರಲ್ಲಿ ಭಾರತೀಯ ಸೇನೆ ಸರಿಸುಮಾರು 88 ಉಗ್ರರನ್ನು ಹತ್ಯೆ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2017ರ ಮೊದಲ 2 ತಿಂಗಳೊಳಗೇ 22 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇದೇ ವೇಳೆ 26 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದು 2010ರ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅತೀ ಹೆಚ್ಚು ಉಗ್ರರನ್ನು 2017ರಲ್ಲಿ ಕೊಲ್ಲಲಾಗಿದ್ದು, ಕೇವಲ 2 ತಿಂಗಳ ಅವಧಿಯಲ್ಲಿ 22 ಮಂದಿ ಉಗ್ರರನ್ನು ಕೊಂದು ಹಾಕಿರುವುದು ಇದೇ ಮೊದಲು.
Comments are closed.