ಕರ್ನಾಟಕ

ಡ್ಯಾನ್ಸ್ ಮಾಸ್ಟರ್ ಕಿರುಕುಳ: ಬಾಲಕಿ ಆತ್ಮಹತ್ಯೆ

Pinterest LinkedIn Tumblr

ಬೆಂಗಳೂರು: ಡ್ಯಾನ್ಸ್‌ ಮಾಸ್ಟರ್‌ ಕಿರುಕುಳ ತಾಳಲಾಗದೆ ಆರನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಯಲಹಂಕದ ಅಟ್ಟೂರು ನಿವಾಸಿಗಳಾದ ಕುಮಾರ್ ಮತ್ತು ಜ್ಯೋತಿ ಅವರ ಪುತ್ರಿ ಚಂದನಾ ವಿದ್ಯಾನಿಕೇತನ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಳು. ಮಗ ಅಕ್ಷಯ್
ತಲೆಯಲ್ಲಿದ್ದ ಹೇನುಗಳ ಸಾಯಿಸಲು ತಂದಿದ್ದ ಪುಡಿ ಸೇವಿಸಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮನೆಯವರು ತಿಳಿಸಿದ್ದಾರೆ.

ಚಂದನಾಳನ್ನು ತಡರಾತ್ರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಸತೀಶ್ ಚಂದನಾಗೆ ಕಿರುಕುಳ ಕೊಡುತ್ತಿದ್ದ ಎಂದು ಸ್ಥಳೀಯರು ಹಾಗೂ ಹಾಗೂ ಪೋಷಕರು ಆರೋಪಿಸಿದ್ದಾರೆ. ಮೃತದೇಹ ಅಂಬೇಡ್ಕರ್ ಕಾಲೇಜ್ನಲ್ಲಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.