ಕ್ರೀಡೆ

ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 6 ರನ್‌ ರೋಚಕ ಜಯ; ಸರಣಿಯನ್ನು ತನ್ನದಾಗಿಸಿಕೊಂಡ ಟೀಂ ಇಂಡಿಯಾ

Pinterest LinkedIn Tumblr

ಕಾನ್ಪುರ: ಇಲ್ಲಿನ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಭಾರತ –ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಆರು ರನ್‌ ಗೆಲುವು ಸಾಧಿಸಿದೆ.

ಭಾರತದ ವಿರುದ್ಧ ಟಾಸ್‌ ಗೆದ್ದ ನ್ಯೂಜಿಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ ಶತಕದ ಜತೆಯಾಟದ ನೆರವಿನಿಂದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. ‌

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಶತಕ ಸಿಡಿಸಿದರು. ರೋಹಿತ್ ಶರ್ಮಾ ತನ್ನ ವೃತ್ತಿ ಜೀವನದ 15ನೇ ಶತಕ ದಾಖಲಿಸಿದರೆ, ಕೊಹ್ಲಿ ಶತಕ ದಾಖಲಿಸುವ ಮೂಲಕ 9 ಸಾವಿರ ರನ್ ಪೂರೈಸಿದ ದಾಖಲೆಯನ್ನು ಮಾಡಿದರು.

ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ ಶಿಖರ್ ದವನ್ 14 ರನ್ ಗಳಿಸಿದರು. ಸ್ಫೋಟಕ ಆಟಗಾರ ಪಾಂಡ್ಯ 87 ರನ್ ಗಳ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಾಯವಾದರು. ಆನಂತರದಲ್ಲಿ ಬಂದ ಧೋನಿ (25), ದಿನೇಶ್ ಕಾರ್ತಿಕ್ (4), ಕೇದರ್ ಜಾದವ್ (18) ರನ್ ಗಳಿಸಿದರು.

ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ 9 ಸಾವಿರ ರನ್ ಗಳಿಸಿದ 6ನೇ ಕ್ರಿಕೆಟಿಗ ಎಂದೆನಿಸಿದರು. ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಈ ದಾಖಲೆ ಮಾಡಿದ್ದಾರೆ.

18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರೋಹಿತ್ ಶರ್ಮಾ 138 ಎಸೆತಗಳಲ್ಲಿ 147 ರನ್ ಗಳಿಸಿ ರೋಹಿತ್ ಶರ್ಮಾ ಔಟಾದರು. 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಮೊದಲ ವಿಕೆಟ್ 7ನೇ ಓವರ್ ನ ಮೊದಲ ಎಸೆತದಲ್ಲಿ ಉರುಳಿತು. 14 ರನ್ ಗಳಿಸಿದ ಓಪನರ್ ಶಿಖರ್ ಧವನ್ ಸೌದಿ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಔಟಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಕಾಲಿನ್ ಮನ್ರೋ (75), ಟಾಮ್ ಲ್ಯಾಥಮ್ (65) ಮತ್ತು ನಾಯಕ ಕೇನ್ ವಿಲಿಯಂ(64) ಅವರ ಅರ್ಧ ಶತಕಗಳ ನೆರವಿನಿಂದ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು. ಬೌಲಿಂಗ್‍ನಲ್ಲಿ ಭಾರತದ ಪರ ಬೂಮ್ರ 3 ವಿಕೆಟ್, ಚಹಾಲ್ 2 ವಿಕೆಟ್, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು.

 

Comments are closed.