ಕರ್ನಾಟಕ

ದಲಿತರ ಪಾಸ್ ಬುಕ್ ಅನ್ನು ಮುಟ್ಟಲು ಪ್ರತ್ಯೇಕ ಪೇಪರ್ ಹಾಗೂ ಪೆನ್ನನ್ನು ಈ ಬ್ಯಾಂಕ್ ಮ್ಯಾನೇಜರ್ ಬಳಸುತ್ತಾನೆ!

Pinterest LinkedIn Tumblr


ತುಮಕೂರು (ಜ.28): ತಂತ್ರಜ್ಞಾನ ಮುಂದುವರೆದಿದೆ, ದಲಿತ – ಬಲ್ಲಿದ ಎಂಬ ಭೇದ – ಭಾವ ಮರೆಯಾಗ್ತಿದೆ. ಆದರೆ ವಿದ್ಯಾವಂತನಾದ ಬ್ಯಾಂಕ್ ಮ್ಯಾನೇಜರ್ ಒಬ್ಬ, ಬ್ಯಾಂಕ್’ಗೆ ಬರುವ ದಲಿತರ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಐಡಿಹಳ್ಳಿಯ ಎಸ್’ಬಿ’ಎಮ್ ಬ್ಯಾಂಕ್ ನಲ್ಲಿ ನಡೆದಿದೆ.

ಈ ಹಳ್ಳಿಯಲ್ಲಿ ದಲಿತರೇ ಹೆಚ್ಚಾಗಿದ್ದು, ಬ್ಯಾಂಕ್’ಗೆ ಹೆಚ್ಚಿನ ಸಂಖ್ಯೆಯಲ್ಲಿ ಅವರೇ ಬರುತ್ತಾರೆ. ಆದ್ದರಿಂದ ಇಲ್ಲಿನ ಎಸ್’ಬಿಎಮ್ ಬ್ಯಾಂಕ್’ನ ಮ್ಯಾನೇಜರ್ ರಂಜಿತ್, ದಲಿತರ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದು ಸಾರ್ವಜನಿಕರಿಗೆ ಇರಿಸು ಮುರಿಸಾಗಿದೆ.
ಈತ ಬ್ಯಾಂಕ್’ಗೆ ಬಂದ ಪ್ರತಿ ಗ್ರಾಹಕರ ಪಾಸ್ ಬುಕ್’ನ್ನು ಕೈಯಲ್ಲಿ ಮುಟ್ಟುವುದಿಲ್ಲ. ಅದಕ್ಕೇ ಅಂತಾನೇ ಪ್ರತ್ಯೇಕವಾದ ಪೇಪರ್ ಹಾಗೂ ಪೆನ್ನನ್ನು ಬಳಸಿ ಪಾಸ್ ಬುಕ್ ಪರಿಶೀಲನೇ ಮಾಡ್ತಾನೆ. ಇದನ್ನು ಗ್ರಾಹಕರು ಪ್ರಶ್ನಿಸಿದರೆ, ನೀವೆಲ್ಲಾ ಸರಿಯಿಲ್ಲದ ಜನ ಅಂತಾನಂತೆ. ಮ್ಯಾನೇಜರ್ ರಂಜಿತ್’ನ ಈ ಕೃತ್ಯದಿಂದ ಬೇಸತ್ತ ಗ್ರಾಹಕರೊಬ್ಬರು ಆತನ ವರ್ತನೆಯನ್ನು ಮೊಬೈಲ್’ನಲ್ಲಿ ಸೆರೆಹಿಡಿದಿದ್ದಾರೆ.

Comments are closed.