ರಾಷ್ಟ್ರೀಯ

ವಾಜಪೇಯಿಗೆ ಮಾಜಿ ಪ್ರಧಾನಿ ಇಂದು ನಮ್ಮೊಂದಿಗಿಲ್ಲ ಎಂದ ಬಿಜೆಪಿ ನಾಯಕಿ

Pinterest LinkedIn Tumblr

Atal-Bihari-Vajpaye
ಅಲಿಘಡ: ಮಾಜಿ ಪ್ರಧಾನಿ, ಅಜಾತ ಶತ್ರು, ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದಂದು ಅವರು ಬದುಕಿಯೇ ಇಲ್ಲ ಎನ್ನುವುದರ ಮೂಲಕ ಬಿಜೆಪಿಯ ವಿವಾದಾತ್ಮಕ ನಾಯಕಿ, ಅಲಿಘಡದ ಮೇಯರ್ ಶಕುಂತಲಾ ಭಾರ್ತಿ ಸ್ವತಃ ತಾನು ಮುಜುಗರಕ್ಕೀಡಾಗಿದ್ದಿದ್ದಲ್ಲದೇ, ಪಕ್ಷಕ್ಕೂ ಮುಜುಗರವನ್ನುಂಟು ಮಾಡಿದ್ದಾರೆ.

ನಿನ್ನೆ ಮಾಜಿ ಪ್ರಧಾನಿ ಅಟಲ್‌ ಜೀ ಮತ್ತು ಮದನ್ ಮೋಹನ್ ಮಾಲವಿಯಾ ಅವರ ಜನ್ಮದಿನದ ನಿಮಿತ್ತ ಅಲಿಘಡದ ಧರ್ಮಜ್ಯೋತಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಕುಂತಲಾ ಭಾರ್ತಿ ಮಾಜಿ ಪ್ರಧಾನಿ ಇಂದು ನಮ್ಮೊಂದಿಲ್ಲ. ಆದರೆ ಅವರ ನೆನಪುಗಳು ಶಾಶ್ವತ ಎಂದಾಗ ಅಲ್ಲಿ ನೆರೆದಿದ್ದವರೆಲ್ಲ ಅವಾಕ್ಕಾಗಿ ಹೋದರು. ಅದು ಕೂಡ ವಾಜಪೇಯಿ ಜನ್ಮದಿನದಂದೇ ಅವರು ಈ ಮಹಾಪ್ರಮಾದವನ್ನೆಸಗಿದ್ದರು.

ಅವರ ಈ ಹೇಳಿಕೆ ಸಭೆಯಲ್ಲಿ ಉಪಸ್ಥಿತರಿದ್ದ ಇನ್ನಿತರ ಬಿಜೆಪಿ ನಾಯಕರ ಮುಖವನ್ನು ಕೆಂಪಗಾಗಿಸಿತು. ಮಾಹಿತಿ ಇಲ್ಲದಿದ್ದರೆ ಮಾತನಾಡಬೇಡಿ ಎಂದು ಅವರಿಗೆ ಬಿಎಸ್‌ಪಿ ನಾಯಕ ನರೇಂದ್ರ ಪಚೌರಿ ಭಾರ್ತಿ ಅವರಿಗೆ ಸಲಹೆ ನೀಡಿದರು.

ತಮ್ಮ ತಪ್ಪನ್ನು ಮುಚ್ಚಿಹಾಕಲು ಪ್ರಯತ್ನಿಸಿದ ನಾಯಕಿ ಮಾಲವಿಯಾ ಬಗ್ಗೆ ಹೇಳಲು ಹೋಗಿ ವಾಜಪೇಯಿ ಹೆಸರನ್ನು ಬಳಸಿದೆ. ನನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಅವರು ದೀರ್ಘಕಾಲ ಆರೋಗ್ಯವಂತರಾಗಿಬೇಕೆಂದು ಅಪೇಕ್ಷಿಸುತ್ತೇನೆ. ನನ್ನ ತಪ್ಪಿಗೆ ಕ್ಷಮೆಯಾಚಿಸ ಬಯಸುತ್ತೇನೆ ಎಂದರು.

Comments are closed.