ರಾಷ್ಟ್ರೀಯ

ಡಿಜಿಟಲ್‌ ವಹಿವಾಟಿನ ಕುರಿತು ‘ಡಿಜಿಶಾಲಾ’ ಟಿವಿ ಚಾನಲ್‌ಗೆ ಚಾಲನೆ

Pinterest LinkedIn Tumblr

ravi-shankarನವದೆಹಲಿ: ಡಿಜಿಟಲ್‌ ವಹಿವಾಟಿನ ಕುರಿತು ಜನರಿಗೆ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಡಿಜಿಧನ್ ಅಭಿಯಾನದ ಅಡಿ ‘ಡಿಜಿಶಾಲಾ’ ಟಿವಿ ಚಾನಲ್‌ ಹಾಗೂ ‘ಡಿಜಿಧನ್‌’ ವೆಬ್‌ಸೈಟ್‌ಗೆ ಸರ್ಕಾರ ಚಾಲನೆಗೆ ನೀಡಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಶುಕ್ರವಾರ ಡಿಜಿಶಾಲಾ ಟಿವಿ ಮತ್ತು ಡಿಜಿಧನ್‌ ಜಾಲತಾಣಕ್ಕೆ ಚಾಲನೆ ನೀಡಿದ್ದಾರೆ. ಡಿಜಿಶಾಲಾ ಟಿವಿ ಮೂಲಕ ಡಿಜಿಟಲ್‌ ಪಾವತಿ ವ್ಯವಸ್ಥೆಯ ಕುರಿತು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ಡಿಜಿಶಾಲಾ ಟಿವಿ ಪ್ರಾರಂಭದಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಡಿಟಿಎಚ್‌ ಮೂಲಕ ಉಚಿತವಾಗಿ ಚಾನೆಲ್‌ ಪ್ರಸಾರ ಲಭ್ಯವಾಗಲಿದೆ.

ನೋಟು ರದ್ದತಿಯ ಬಳಿಕ ಡಿಜಿಟಲ್‌ ಪಾವತಿ ವ್ಯವಸ್ಥೆಯ ಬಳಕೆ ಹೆಚ್ಚಳವಾಗಿದೆ. ಒಂದು ತಿಂಗಳಲ್ಲಿ ಇ–ವಾಲೆಟ್‌ ಬಳಕೆದಾರರ ಸಂಖ್ಯೆ 17 ಲಕ್ಷದಿಂದ 63 ಲಕ್ಷಕ್ಕೆ ಹಾಗೂ ಪಾಯಿಂಟ್‌ ಆಫ್‌ ಸೇಲ್‌(ಪಿಒಎಸ್‌) ನಿತ್ಯ ಬಳಕೆ 50.2 ಲಕ್ಷದಿಂದ 98.1 ಕೋಟಿಗೆ ಏರಿಕೆ ಕಂಡಿದೆ ಎಂದು ಸಚಿವ ರವಿ ಶಂಕರ್‌ ಪ್ರಸಾದ್‌ ತಿಳಿಸಿದರು.

Comments are closed.