ಗಲ್ಫ್

ಕೆಸಿಎಫ್ ದುಬೈ ಇಲಲ್ ಹಬೀಬ್ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಪ್ರತಿಭೋತ್ಸವ

Pinterest LinkedIn Tumblr

kcf-dubai-prathibothsawa

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ದುಬೈ ಸಮಿತಿ ವತಿಯಿಂದ ಪ್ರೀತಿಯ ಪ್ರವಾದಿ ಶಾಂತಿಯ ಹಾದಿ ಎಂಬ ಶೀರ್ಷಿಕೆಯಲ್ಲಿ ಡಿಸೆಂಬರ್ 23 ರಂದು ದುಬೈ ನಲ್ಲಿ ನಡೆಯುವ ಇಲಲ್ ಹಬೀಬ್ ಬೃಹತ್ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಅನಿವಾಸಿ ಕನ್ನಡಿಗರಿಗೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭೋತ್ಸವ ನಡೆಯಲಿದೆ.

ಖಿರಾಅತ್, ಕನ್ನಡ ಇಂಗ್ಲಿಷ್ ಮಲಯಾಳಂ ಭಾಷೆಗಳಲ್ಲಿ ಭಾಷಣಗಳು, ಪದ್ಯ, ಮಾಪಿಳಪ್ಪಾಟ್, ಅರೇಬಿಕ್ ಹಾಡು, ಕವನ ರಚನೆ, ಕ್ವಿಝ್ ಮುಂತಾದ ವಿಷಯಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು ಹಾಗು ಸಾಮಾನ್ಯ ಎಂಬ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಗುವುದು. ಸ್ತ್ರೀಯರಿಗಾಗಿ “ಪ್ರವಾದಿ ಕುಟುಂಬ” ಎಂಬ ವಿಷಯದಲ್ಲಿ ವಿಶೇಷ ಪ್ರಭಂದ ಸ್ಪರ್ಧೆ ನಡೆಯಲಿದೆ.

ಯುಎಇ ಯಲ್ಲಿರುವ ಅನಿವಾಸಿ ಕನ್ನಡಿಗರಾದ ಪ್ರತಿಭೆಗಳು ವಿಶೇಷವಾಗಿ ಫ್ಯಾಮಿಲಿಗಳು ಇದರ ಸದುಪಯೋಗ ಪಡೆಯಬೇಕಾಗಿ ಮತ್ತು ಆಸಕ್ತ ಪ್ರತಿಭೆಗಳು ಹಾಗೂ ವಿದ್ಯಾರ್ಥಿಗಳು ಡಿಸೆಂಬರ್ 9 ರೊಳಗೆ ಹೆಸರನ್ನು ನೋಂದಾಯಿಸಬೇಕಾಗಿ ಕೆಸಿಎಫ್ ದುಬೈ ಪ್ರತಿಭೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
050-7268155, 055-5271713, 055-2337484

Comments are closed.