ಕರ್ನಾಟಕ

ಮಗನಿಂದ ಕುಡುಕ ತಂದೆಯ ಕೊಲೆ

Pinterest LinkedIn Tumblr

sonಬೆಂಗಳೂರು: ನಗರದಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ ನಡೆದಿದೆ.

ರಾಜಗೋಪಾಲನಗರದ ದುಗಲಾಂಬಾ ದೇವಸ್ಥಾನದ ಬಳಿ ಘಟನೆ ನಡೆದಿದೆ. 50 ವರ್ಷ ವಯಸ್ಸಿನ ರಾಜಪ್ಪ ಮಗನಿಂದಲೇ ಕೊಲೆಯಾದ ತಂದೆ. ಪ್ರತಿನಿತ್ಯ ಕುಡಿದು ಬರುತ್ತಿದ್ದ ತಂದೆ ರಾಜಪ್ಪನಿಂದ ಬೇಸತ್ತ ಮಗ ಹರೀಶ್ (19) ರಾತ್ರಿ ತಂದೆಯನ್ನು ಹತ್ಯೆ ಮಾಡಿದ್ದಾನೆ.

ನಿನ್ನೆ ರಾತ್ರಿ ಕುಡಿದು ಬಂದು ಹೆಂಡತಿ ನಾಗಮ್ಮಳನ್ನು ರಾಜಪ್ಪ ಹೊಡೆದಿದ್ದ. ಬಳಿಕ ಮಗ ಹರೀಶ್, ತಾಯಿ ನಾಗಮ್ಮಳನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ. ನಂತರ ಮನೆಗೆ ಹಿಂದಿರುಗಿ ಮಲಗಿದ್ದ ತಂದೆ ರಾಜಪ್ಪನನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಂದಿದ್ದಾನೆ.

ಆರೋಪಿ ಹರೀಶ್‍ನನ್ನು ಪೊಲೀಸರು ಬಂಧಿಸಿದ್ದು, ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.