ರಾಷ್ಟ್ರೀಯ

ಉರಿ ದಾಳಿ: ಒಂದೂ ಗುಂಡು ಹಾರಿಸದೇ ಪಾಕ್ ಶೇರುಪೇಟೆ ಛಿದ್ರ

Pinterest LinkedIn Tumblr

pak
ನವದೆಹಲಿ: ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಉಭಯ ದೇಶಗಳಲ್ಲೂ ಉದ್ರಿಕ್ತ ವಾತಾವರಣ ಉಂಟಾಗಿದೆ.

ಇದೀಗ ಭಾರತ ಪಾಕ್ ಮೇಲೆ ಯುದ್ಧ ಹೇರಲಿದೆಯೇ ಎನ್ನುವ ಆತಂಕದಿಂದಾಗಿ ಶೇರುಪೇಟೆ ಪಾತಾಳಕ್ಕೆ ಕುಸಿತ ಕಂಡಿದೆ. ಭಾರತ ಒಂದೇ ಒಂದು ಗುಂಡು ಹಾರಿಸದೆ ಶೇರುಪೇಟೆ ಖಲ್ಲಾಸ್ ಮಾಡಿದೆ.

ಕರಾಚಿ ಶೇರುಪೇಟೆ ಸೂಚ್ಯಂಕ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.1.41 ರಷ್ಟು ಕುಸಿದ ಕಂಡು 39771.42 ಅಂಕಗಳಿಗೆ ತಲುಪಿದೆ.

ದೇಶಿಯ ರಾಜಕೀಯದ ಕಳವಳ ಮತ್ತು ಭಾರತ-ಪಾಕಿಸ್ತಾನದ ಮಧ್ಯೆ ಎದುರಾಗಿರುವ ಉದ್ರಿಕ್ತತೆಯಿಂದ ಶೇರುಪೇಟೆ ಬಾರಿ ಕುಸಿತ ಕಂಡಿದೆ ಎಂದು ಪಾಕ್ ಪತ್ರಿಕೆಗಳು ವರದಿ ಮಾಡಿವೆ.

ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿ 18 ಸೈನಿಕರನ್ನು ಕೊಂದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ರಿಕ್ತ ವಾತಾವರಣ ಉಂಟಾಗಿದೆ.

ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ ಭಾರತ, ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವಾಗಿದ್ದು, ಯುದ್ಧಪರಾಧವನ್ನು ಎಸಗುತ್ತಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವನಿ ಹೆಸರನ್ನು ಬಳಸುವ ಮೂಲಕ ಭಯೋತ್ಪಾದನೆಗೆ ಬೆಂಬಲಿಸುತ್ತಿದೆ ಎನ್ನುವುದನ್ನು ತಾನೇ ಒಪ್ಪಿಕೊಂಡಿದೆ ಎಂದು ಕಿಡಿಕಾರಿದೆ.

Comments are closed.