ರಾಷ್ಟ್ರೀಯ

ಚಾಂಡೀಪುರದಲ್ಲಿ ದೂರಗಾಮಿ ಕ್ಷಿಪಣಿ ಯಶಸ್ವಿ ಉಡಾವಣೆ

Pinterest LinkedIn Tumblr
Chandipur : Long Range Surface to Air missile ( LRSAN) lifts off after it was test fired at the integrated test range at Chandipur off Odisha coast on Tuesday. PTI Photo (PTI9_20_2016_000248B)
Chandipur

ಬಾಲಸೋರ್ (ಒಡಿಶಾ): ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನೆಲದಿಂದ ಆಗಸಕ್ಕೆ ಚಿಮ್ಮುವ ದೂರಗಾಮಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಇಲ್ಲಿನ ಚಾಂಡೀಪುರದಲ್ಲಿರುವ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 10.30ಕ್ಕೆ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಕ್ಷಿಪಣಿ ಜತೆಗೆ, ಅದರಲ್ಲಿರುವ ಗುರಿ ಮತ್ತು ಜಾಡು ಪತ್ತೆ ವ್ಯವಸ್ಥೆಗಳು ಹಾಗೂ ಅಪಾಯ ಮುನ್ಸೂಚನಾ ವ್ಯವಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಉಡಾವಣೆ ಸಲುವಾಗಿ ಕೇಂದ್ರದಿಂದ 2.5 ಎಕರೆ ವ್ಯಾಪ್ತಿಯಲ್ಲಿ ವಾಸವಿದ್ದ 3,652 ನಾಗರಿಕರನ್ನು ತಾತ್ಕಾಲಿಕವಾಗಿ ತೆರವು ಮಾಡಲಾಗಿತ್ತು.

ಈ ಸರಣಿಯ ಕ್ಷಿಪಣಿಗಳನ್ನು ಈಗಾಗಲೆ ಹಲವು ಬಾರಿ ಬೇರೆ ಬೇರೆ ವಾತಾವರಣಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಬಾಕಿ ಪರೀಕ್ಷೆಗಳ ನಂತರ ಇವುಗಳನ್ನು ಸೇನೆಗೆ ಹಸ್ತಾಂತರಿಸಲಾಗುತ್ತದೆ ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.

Comments are closed.