ರಾಷ್ಟ್ರೀಯ

ಕಾಶ್ಮೀರ: ಸೇನೆಯಿಂದ 10 ಉಗ್ರರ ಹತ್ಯೆ

Pinterest LinkedIn Tumblr

army-2

ಉರಿ/ನವದೆಹಲಿ: ಉತ್ತರ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದು ಎರಡೇ ದಿನಗಳಲ್ಲಿ ಗಡಿ ದಾಟಿ ಒಳನುಸುಳುವ ಎರಡು ಪ್ರಯತ್ನಗಳನ್ನು ಭದ್ರತಾ ಪಡೆ ವಿಫಲಗೊಳಿಸಿದೆ. ಈ  ವೇಳೆ ಹತ್ತು ಉಗ್ರರನ್ನು ಕೊಲ್ಲಲಾಗಿದೆ. ಭದ್ರತಾ ಪಡೆಯ ಒಬ್ಬ ಯೋಧ ಅಸು ನೀಗಿದ್ದಾರೆ.

ಭಾರತದ ಗಡಿಯೊಳಕ್ಕೆ ನುಗ್ಗಲು ಉಗ್ರರಿಗೆ ನೆರವಾಗುವುದಕ್ಕಾಗಿ ಮಂಗಳವಾರ ಮಧ್ಯಾಹ್ನ ಪಾಕಿಸ್ತಾನ ಪಡೆ ಕದನ ವಿರಾಮ ಉಲ್ಲಂಘಿಸಿ ಭಾರತದ ಕಾವಲು ಠಾಣೆಗಳತ್ತ ಗುಂಡು ಹಾರಾಟ ಆರಂಭಿಸಿತ್ತು.

ಉರಿ ಮತ್ತು ನೌಗಾಮ್‌ ವಲಯಗಳಲ್ಲಿ ಉಗ್ರರು ಒಳನುಸುಳುವ ಪ್ರಯತ್ನ ವಿಫಲಗೊಳಿಸಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ. ನೌಗಾಮ್‌ ವಲಯದಲ್ಲಿ ಯೋಧನೊಬ್ಬ ಹುತಾತ್ಮರಾದರು ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.

15 ಉಗ್ರರ ಗುಂಪು ಒಳನುಸುಳುವ ಯತ್ನ ನಡೆಸಿತ್ತು ಎಂದು ಮೂಲಗಳು ಹೇಳಿವೆ. ಭಾನುವಾರ ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ನಾಲ್ವರು ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣರಾಗಿದ್ದರು.

Comments are closed.