ರಾಷ್ಟ್ರೀಯ

ಬಸ್‌ನಲ್ಲಿ ಮಗು ಸಜೀವ ದಹನ

Pinterest LinkedIn Tumblr

gulfireclrಹುಮನಾಬಾದ, ಸೆ. ೧೬ – ಶಿರಡಿಯಿಂದ ಹೈದ್ರಾಬಾದಗೆ ತೆರಳುತ್ತಿದ್ದ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‌ನಲ್ಲಿದ್ದ ಮಗುವೊಂದು ಸಜೀವವಾಗಿ ದಹನವಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ವಿಹಾನ್ ತಂದೆ ರಾಮಪ್ರಸಾದ(೩)ಸಾ.ಗಚ್ಚಿಬೌಲಿ ಹೈದ್ರಾಬಾದ ಎಂಬುವುದೇ ಬೆಂಕಿಯಲ್ಲಿ ಬೆಂದ ಮಗುವಾಗಿದೆ. ಖಾಸಗಿ ಸ್ಲೀಪರ್ ಟ್ರಾವೇಲ್ಸ್‌ನಲ್ಲಿ ಶಿರಡಿಯಿಂದ ಹೈದ್ರಾಬಾದಗೆ ಹೋಗುತ್ತಿದ್ದಾಗ, ಪಟ್ಟಣದ ಹೊರವಲಯದ ಠಾಕೂರ ಧಾಬಾ ಬಳಿ ಏಕಾಏಕಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬಸ್ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ರಾಮ ಪ್ರಸಾದ ಎಂಬ ಪ್ರಯಾಣಿಕರು ತನ್ನ ಮಗುವೆಂದು ಇನ್ನೊಬ್ಬರ ಮಗುವನ್ನು ಎತ್ತಿಕೊಂಡು ಕೆಳಗಿಳಿದ್ದಾನೆ. ನಂತರ ತನ್ನ ಮಗು ಬಸ್‌ನಲ್ಲಿಯೇ ಉಳಿದಿದೆ ಎಂದು ತಿಳಿಯುವಷ್ಟರಲ್ಲಿ ಬೆಂಕಿಯ ಜ್ವಾಲೆ ಇಡೀ ಬಸ್‌ನ್ನು ಆವರಿಸಿದೆ. ನಿದ್ದೆಯಲ್ಲಿದ್ದ ಮಗು ಬೆಂಕಿಯಲ್ಲಿ ಸಜೀವ ದಹನವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ದುರಂತದಲ್ಲಿ ೩ ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.ದುರಂತಕ್ಕೆ ಶಾರ್ಟ ಸರ್ಕಿಟ್ ಕಾರಣವಾಗಿದೆ ಎಂದು ಬೀದರ ಎಸ್.ಪಿ.ನಿಕ್ಕಂ ಪ್ರಕಾಶ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ದತ್ತಾತ್ರೇಯ ಕಾರ್ನಾಡ, ಪಿಎಸ್‌ಐ ಗುರುಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಹುಮನಾಬಾದ ಠಾಣೆಯಲ್ಲಿ ದಾಖಲಾಗಿದೆ.

Comments are closed.