ಮನೋರಂಜನೆ

ನಟಿಗೆ ಲೈಂಗಿಕ ಕಿರುಕುಳ:ರಾಜ್‌ ವಿರುದ್ಧ ಇನ್ನೊಂದು ದೂರು ದಾಖಲು

Pinterest LinkedIn Tumblr

rajj

ಮುಂಬಯಿ: ಕಿರುತೆರೆ ನಟಿಯಾಗಿದ್ದ ಗೆಳತಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿರುವ ಆರೋಪ ಎದುರಿಸುತ್ತಿರುವ ರಾಹುಲ್‌ ರಾಜ್‌ ಸಿಂಗ್‌ ವಿರುದ್ಧ ಅಂಧೇರಿ ಪೊಲೀಸ್‌ ಠಾಣೆಯಲ್ಲಿ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ದೂರು ದಾಖಲಾಗಿದೆ.

ಅಂಧೇರಿ ಪಶ್ಚಿಮದಲ್ಲಿರುವ ಹೊಟೇಲೊಂದರಲ್ಲಿ ಸೋಮವಾರ ತಡರಾತ್ರಿ ಗೆಳೆಯನ ಜತೆಗೆ ಬಂದಿದ್ದ ನಟಿಗೆ ರಾಹುಲ್‌ ಕಿರುಕುಳ ನೀಡಿದ್ದಾರೆ ಹಾಗೂ ಆಕೆಯ ಗೆಳೆಯನ ಮೇಲೆ ಹಲ್ಲೆ ಮಾಡಿದ್ದಾರೆ. ರಾಹುಲ್‌ ಈ ಹೊಟೇಲ್‌ಗೆ ಓರ್ವ ಗೆಳತಿ ಜತೆಗೆ ಊಟ ಮಾಡಲು ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಟಿ ನೀಡಿದ ದೂರಿನ ಪ್ರಕಾರ ಪೊಲೀಸರು ರಾಹುಲ್‌ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ರಾಹುಲ್‌ ಜತೆಗಿದ್ದ ಯುವತಿ ನಟಿಯ ವಿರುದ್ಧ ಪ್ರತಿದೂರು ನೀಡಿದ್ದಾರೆ. ಕಳೆದ ಎ.1ರಂದು ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಾಂಗೂರ್‌ನಗರ್‌ ಪೊಲೀಸರು ರಾಹುಲ್‌ರನ್ನು ಬಂಧಿಸಿದ್ದರು. ಹಲವು ದಿನ ಜೈಲಿನಲ್ಲಿ ಕಳೆದ ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

-ಉದಯವಾಣಿ

Comments are closed.