ರಾಷ್ಟ್ರೀಯ

ವಿವಾಹವಾಗುವ ಆಮಿಷವೊಡ್ಡಿ ರೇಪ್ ಎಸಗಿದ ಜೆಎನ್‌ಯು ವಿದ್ಯಾರ್ಥಿ ಬಂಧನ

Pinterest LinkedIn Tumblr

rapeeನವದೆಹಲಿ: ವಿವಾಹವಾಗುವ ಆಮಿಷವೊಡ್ಡಿ 26 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ಮೂಲದ ಅಜಯ್ ಸಿಂಗ್ ವಿವಾಹವಾಗುವುದಾಗಿ ನಂಬಿಸಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2008ರಿಂದಲೂ ಆರೋಪಿಗೆ ಮಹಿಳೆ ಚಿರಪರಿಚಿತಳಾಗಿದ್ದಳು. 2010ರಲ್ಲಿ ದೆಹಲಿ ಬಂದ ನಂತರ ಇಬ್ಬರು ನಡುವೆ ದೈಹಿಕ ಸಂಬಂಧವಿತ್ತು. ಯುವತಿ ಹಲವಾರು ಬಾರಿ ವಿವಾಹವಾಗುವಂತೆ ಮನವಿ ಮಾಡಿದರೂ ಅದನ್ನು ಅಜಯ್ ಸಿಂಗ್ ತಿರಸ್ಕರಿಸಿದ್ದರಿಂದ ಯುವತಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ವಸಂತ ಕುಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಜಯ್ ಸಿಂಗ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು, ಅತ್ಯಾಚಾರದ ಆರೋಪದ ಮೇಲೆ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿಯನ್ನು ಬಂಧಿಸಿದ್ದನ್ನು ಸ್ಮರಿಸಬಹುದು.

Comments are closed.