
ಮಂಗಳೂರು, ಸೆ.14: ಸಮುದ್ರದಲ್ಲಿ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಮಂಗಳವಾರ ಪಣಂಬೂರು ಬೀಚ್ನಲ್ಲಿ ಸಂಭವಿಸಿದೆ.
ಮೃತನನ್ನು ಕೊಡಗು ಜಿಲ್ಲೆ ಶನಿವಾರ ಸಂತೆ ನಿವಾಸಿ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಪ್ರಫುಲ್ (20) ಎಂದು ಗುರುತಿಸಲಾಗಿದೆ.
ಪ್ರಫುಲ್, ರತನ್ ಹಾಗೂ ಇತರ ನಾಲ್ವರು ಸ್ನೇಹಿತರು ಪಂಣಂಬೂರು ಬೀಚಿಗೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಪ್ರಫುಲ್ ಈಜಲೆಂದು ಸಮುದ್ರ ಕಿನಾರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಗಳು ಪ್ರಫುಲ್ನನ್ನು ಸಮುದ್ರಕ್ಕೆ ಧುಮುಕದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಎಚ್ಚರಿಕೆಯನ್ನು ಧಿಕ್ಕರಿಸಿ ಪ್ರಫುಲ್ ಸಮುದ್ರಕ್ಕೆ ಇಳಿದ ಪರಿಣಾಮ ಅಲೆಗಳ ಸೆಳೆತಕ್ಕೆ ಒಳಗಾಗಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.