ಕ್ರೀಡೆ

ಪ್ಯಾರಾಲಿಂಪಿಕ್ಸ್; ಜಾವೆಲಿನ್ ಥ್ರೋದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ದೇವೇಂದ್ರ ಜಾಜರಿಯಾ

Pinterest LinkedIn Tumblr

devendra-jhajharia-rio

ರಿಯೋ ಡಿ ಜನೈರೋ: ಭಾರತದ ಪ್ಯಾರಾ ಅಥ್ಲೀಟ್ ದೇವೇಂದ್ರ ಜಾಜರಿಯಾ ರಿಯೋ ಪ್ಯಾರಾಲಿಂಪಿಕ್ಸ್ ಎಫ್ 46 ಜಾವೆಲಿನ್ ಥ್ರೋದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ತಮ್ಮದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ ವಿಶಿಷ್ಟ ಸಾಧನೆಯನ್ನು ದೇವೇಂದ್ರ ಮಾಡಿದ್ದಾರೆ.

2004ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ 62.15 ಮೀಟರ್ ಎಸೆದು ವಿಶ್ವದಾಖಲೆ ನಿರ್ಮಿಸಿದ್ದ ದೇವೇಂದ್ರ, ಭಾರತದ ಪರ ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಚಿನ್ನದ ಪದಕ ಗೆದ್ದ ಏಕೈಕ ಸಾಧಕ ಎನಿಸಿದರು. 36 ವರ್ಷದ ಜಜಾರಿಯಾ ಈ ಬಾರಿ 63.97 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

ಇದೇ ಸ್ಪರ್ಧೇಯಲ್ಲಿ ಭಾರತದ ರಿಂಕೂ ಹೂಡಾ 54.39 ಮೀಟರ್ ದೂರ ಎಸೆಯುವ ಮೂಲಕ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡ್ರು. ಆದರೆ ಸುಂದರ್ ಸಿಂಗ್ ಗುರ್ಜರ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ದೇವೇಂದ್ರ ಜಾಜರಿಯಾ ವಿಶ್ವ ಶ್ರೇಯಾಂಕದಲ್ಲಿ ಮೂರನೆ ಸ್ಥಾನ ಹೊಂದಿದ್ದಾರೆ.

Comments are closed.