ಕರಾವಳಿ

ಬಕ್ರೀದ್ ಸಂಭ್ರಮ : ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಭಾಂಧವರಿಂದ ಸಾಮೂಹಿಕ ಪ್ರಾರ್ಥನೆ

Pinterest LinkedIn Tumblr

bakrida_celebrtion_1

ಮಂಗಳೂರು, ಸೆ.12: ನಾಡಿನಾದ್ಯಂತ ಇಂದು ಬಕ್ರೀದ್ ಹಬ್ಬದ್ದ ಸಂಭ್ರಮ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ‘ಬಕ್ರೀದ್’ (ಈದುಲ್ ಅಝ್ ಹಾ) ಹಬ್ಬವನ್ನು ಕರಾವಳಿಯಾದ್ಯಂತ ಮುಸ್ಲಿಂ ಭಾಂಧವರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು.

ಸೋಮವಾರ ಬೆಳಗ್ಗೆ ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ, ಉಳ್ಳಾಲ ಕೇಂದ್ರ ಜುಮಾ ಮಸೀದಿ, ತಖ್ವಾ ಮಸೀದಿ ಪಂಪ್ವೆಲ್, ಸಹಿತ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ನಮಾಝ್ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಆ ಬಳಿಕ ಬಂಧು ಮಿತ್ರರ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

bakrida_celebrtion_2 bakrida_celebrtion_3 bakrida_celebrtion_4 bakrida_celebrtion_5 bakrida_celebrtion_6 bakrida_celebrtion_7 bakrida_celebrtion_8 bakrida_celebrtion_9 bakrida_celebrtion_10 bakrida_celebrtion_11 bakrida_celebrtion_12 bakrida_celebrtion_13 bakrida_celebrtion_14 bakrida_celebrtion_15 bakrida_celebrtion_16 bakrida_celebrtion_17 bakrida_celebrtion_18 bakrida_celebrtion_19 bakrida_celebrtion_20 bakrida_celebrtion_21 bakrida_celebrtion_22 bakrida_celebrtion_23 bakrida_celebrtion_24 bakrida_celebrtion_25 bakrida_celebrtion_26 bakrida_celebrtion_27 bakrida_celebrtion_28 bakrida_celebrtion_29 bakrida_celebrtion_30 bakrida_celebrtion_31 bakrida_celebrtion_32 bakrida_celebrtion_33 bakrida_celebrtion_34 bakrida_celebrtion_35 bakrida_celebrtion_36 bakrida_celebrtion_37 bakrida_celebrtion_38 bakrida_celebrtion_39

ಬಾವುಟಗುಡ್ಡೆಯ ಈದ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಖಾಝಿ ಅಲಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಿ ಹಬ್ಬದ ಸಂದೇಶ ನೀಡಿದರು.

ಉಳಿದಂತೆ ಜಿಲ್ಲೆಯ ಇತರ ಪ್ರಾರ್ಥನ ಕೇಂದ್ರಗಳಾದ ಅಲ್ ಫುರ್ಖಾನ್ ಸೆಂಟರ್, ಪುತ್ತಿಗೆ-ಮೂಡುಬಿದಿರೆ, ರಹ್ಮಾನಿಯಾ ಮಸೀದಿ ಕಂಕನಾಡಿ,ಕಚ್ಚಿಮೆಮನ್ ಮಸೀದಿ ಬಂದರ್
ಅಲ್ ಹಿದಾಯ ಜುಮಾ ಮಸೀದಿ, ಹಿದಾಯತ್ ನಗರ, ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ.ಸಿ.ರೋಡ್, ಕೂಳೂರು ಮುಹಿಯುದ್ದೀನ್ ಜುಮಾ ಮಸ್ಜಿದ್, ಗೌಸಿಯಾ ಮುಹಿಯುದ್ದೀನ್ ಜುಮಾ ಮಸೀದಿ ತಣ್ಣೀರುಬಾವಿ, ಬದ್ರಿಯಾ ಜುಮಾ ಮಸ್ಜಿದ್ ಪೂಂಜಾಲಕಟ್ಟೆ, ಬದ್ರಿಯಾ ಜುಮಾ ಮಸೀದಿ ಜೆಪ್ಪು, ಕುಡುಪಾಡಿ, ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್, ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ, ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲಡ್ಕ, ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ್, ಮುಹಿಯುದ್ದೀನ್ ಜುಮಾ ಮಸೀದಿ ಆಲಡ್ಕ, ಮುಹಿಯುದ್ದೀನ್ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ, ಬದ್ರಿಯಾ ಜುಮಾ ಮಸೀದಿ ಬಂಟ್ವಾಳ ಕೆಳಗಿನಪೇಟೆ, ಬದ್ರಿಯಾ ಜುಮಾ ಮಸೀದಿ ಅಮ್ಮೆಮಾರ್, ಬದ್ರಿಯಾ ಜುಮಾ ಮಸೀದಿ ತಲಪಾಡಿ,ಬದ್ರಿಯಾ ಜುಮಾ ಮಸೀದಿ ನೆಹರೂ ನಗರ,ಕೇಂದ್ರ ಜುಮಾ ಮಸೀದಿ ಸಜಿಪನಡು,
ಕೇಂದ್ರ ಜುಮಾ ಮಸೀದಿ ಅಕ್ಕರಂಗಡಿ,ಕೇಂದ್ರ ಜುಮಾ ಮಸೀದಿ ವಿಟ್ಲ ,ಕೇಂದ್ರ ಜುಮಾ ಮಸೀದಿ ಮೇಗಿನಪೇಟೆ ವಿಟ್ಲ ,ರಿಫಾಯಿಯಾ ಜುಮಾ ಮಸೀದಿ ಮಂಚಿ,ಕಡಂಬು ಜುಮಾ ಮಸೀದಿ ,ಮುಹಮ್ಮದೀಯ ಜುಮಾ ಮಸೀದಿ ಮಂಚಿ,ಅಲ್ ಬದ್ರಿಯಾ ಜುಮಾ ಮಸೀದಿ ಎಸ್.ಯು.ನಗರ ಪಾಡಿಲ ಅಲ್ಲಿಪಾದೆ,ನೂರುದ್ದೀನ್ ಜುಮಾ ಮಸೀದಿ ಗುಡ್ಡೆಯಂಗಡಿ ,ಪಾಂಡವರಕಲ್ಲು ಜುಮಾ ಮಸೀದಿ ,ತ್ವಾಹ ಜುಮಾ ಮಸೀದಿ, ಬೇಳ್ಪಾಡಿ, ಕುಂತೂರು, ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ,ಮುಹಿಯುದ್ದೀನ್ ಜುಮಾ ಮಸೀದಿ ಜಲಾಲಿಯ್ಯನಗರ ಚಾರ್ಮಾಡಿ ,ರಹ್ಮಾನಿಯಾ ಮಸೀದಿ ಅರ್ಕುಳ ,ಮುಹಿಯುದ್ದೀನ್ ಜುಮಾ ಮಸ್ಜಿದ್ ಕಾಟಿಪಳ್ಳ
ತೌಹೀದ್ ಜುಮಾ ಮಸ್ಜಿದ್ ಸುನ್ನತ್ಕೆರೆ ,ತೌಹೀದ್ ಮಸೀದಿ ಸೂರಲ್ಪಾಡಿ ,ಸಲಫಿ ಮಸೀದಿ ಎಪಿಎಂಸಿ ರಸ್ತೆ ಪುತ್ತೂರು ,ಮಸ್ಜಿದ್ ಸಲಾಂ ಜಲ್ಲಿಗುಡ್ಡೆ ಪಡೀಲ್ ,ಮಸ್ಜಿದ್ ಅಲಿ ಬಿನ್ ಅಬಿ ತಾಲಿಬ್, ಕರೈ ಸಾಲೆತ್ತೂರು
ಮಸ್ಜಿದ್ ದಾರುತ್ತ್ಹೀದ್ ಸಿಪಿಸಿ ಕಾಂಪೌಂಡ್ ಉಪ್ಪಿನಂಗಡಿ ,ಸಲಫಿ ಮಸ್ಜಿದ್ ಮಲಾರ್ ಬದ್ರಿಯಾನಗರ ,ಮಸ್ಜಿದ್ ಉಮ್ಮುಲ್ ಆಯಿಶಾ ಸಿದ್ದೀಖಾ ಅಡ್ಡೂರ್ ,ಮಸ್ಜಿದುರ್ರಹ್ಮಾನ್ ಚೊಕ್ಕಬೆಟ್ಟು ,ಮಸ್ಜಿದ್ ಸಲಾಂ ಕೊಣಾಜೆ
ಮಸ್ಜಿದ್ ಸಲ್ಸಬೀಲ್ ಉಳ್ಳಾಲ ,ಸಲಫಿ ಮಸೀದಿ ಪೈಚಾರ್ ಸುಳ್ಯ ,ಸಲಫಿ ಮಸೀದಿ ಉದ್ದೊಟ್ಟು-ಆಲಂಪಾಡಿ ,ಮಸ್ಜಿದ್ ನೂರುಲ್ ಈಮಾನ್ ಕಡಂದಲೆ ,ಮಸ್ಜಿದ್ ಅಬೂ ಹುರೈರಾ ಹಂಡೇಲು ,ಮಸ್ಜಿದುಲ್ ಅಸ್ಗರ್ ಕೋಡಿ ಕೋಟೆಪುರ ,ಮಸ್ಜಿದ್ ತೌಹೀದ್ ಮರ್ಜೋಡಿ ಕೊಕ್ಕಡ ,ಮಸ್ಜಿದ್ ಇಬ್ರಾಹೀಂ ಖಲೀಲ್ ಮಂಗಳೂರು ,ಸಲಫಿ ಮಸೀದಿ ವಿಜಯನಗರ ಪಡೀಲ್ ,ಮಸ್ಜಿದ್ ಆಯಿಶಾ ಲಾಡಿ ಮೂಡುಬಿದಿರೆ, ಸಲಫಿ ಮಸೀದಿ ಪಟ್ಲ ಕಲ್ಲಾಪು ,ಮಸ್ಜಿದ್ ತಖ್ವಾ ಕೋಟೆಬಾಗಿಲು ಮೂಡುಬಿದಿರೆ , ಮಸ್ಜಿದ್ ಬಿಲಾಲ್ ಮರಕಡ ಕುಂಜತ್ತಬೈಲ್ ,ಮಸ್ಜಿದ್ ಉಮರ್ ಬಿನ್ ಖತ್ತಾಬ್ ಬೆಳ್ಮ,ಮಸ್ಜಿದ್ ಅಲ್ ಫುರ್ಖಾನ್ ಅಳೇಕಲ ,ಸಲಫಿ ಮಸೀದಿ,ಎನ್.ಸಿ.ರೋಡ್ ಬೋಳಂತೂರು ,ಮಸ್ಜಿದ್ ಬಿರ್ರುಲ್ ವಾಲಿದೈನ್ ಫರಂಗಿಪೇಟೆ ,ಮಸ್ಜಿದ್ ತೌಹೀದ್ ಗಾಣದಬೆಟ್ಚು ಕಣ್ಣೂರು ,ಸಲಫಿ ಮಸೀದಿ ಟಿಪ್ಪುಸುಲ್ತಾನ್ ನಗರ ಕುದ್ರೋಳಿ ,ಮಸ್ಜಿದ್ ತೌಹೀದ್ ಗಾಂಧಿ ಮೈದಾನ್ ಕಾರ್ನಾಡ್ ,ಮಸ್ಜಿದ್ ಅಬ್ರಾರ್ ತಲಪಾಡಿ ,ಮಸ್ಜಿದ್ ಮುಸ್ತಫಾ ಶರೀಫ್ ಅಬ್ಬೆಟ್ಟು ,ಹವ್ವಾ ಜುಮಾ ಮಸೀದಿ ಬೋಳಂಗಡಿ ,ಮಸ್ಜಿದ್ ಉಸ್ಮಾನ್ ಬಿನ್ ಅಫ್ವಾನ್ ನಂದಾವರ ಮುಂತಾದೆಡೆಗಳಲ್ಲಿ ಮುಸ್ಲಿಮ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಾರ್ವತ್ರಿಕ ರಜೆ ನಾಳೆ : ದ.ಕ. -ಉಡುಪಿಯಲ್ಲಿ ಇಂದು ರಜೆ

ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸರಕಾರ ಸೆ.13ರಂದು ಸಾರ್ವತ್ರಿಕ ರಜೆ ಘೋಷಿಸಿದೆ. ಆದರೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ಬಕ್ರೀದ್ ಆಚರಣೆ ಹಮ್ಮಿಕೊಂಡಿರುವುದರಿಂದ ಈ ಎರಡು ಜಿಲ್ಲೆಗಳಿಗೆ ಇಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ರಾಜ್ಯ ಸರಕಾರ ಆದೇಶ ನೀಡಿದೆ.

Comments are closed.