ಮನೋರಂಜನೆ

ಜನವರಿಯಿಂದ ಹಾಲಿವುಡ್ ಸಿನೆಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿರುವ ಧನುಷ್

Pinterest LinkedIn Tumblr

dhanushಚೆನ್ನೈ: ತಮ್ಮ ಚೊಚ್ಚಲ ನಿರ್ದೇಶನದ ಚಲನಚಿತ್ರ ತಮಿಳಿನ ‘ಪವರ್ ಪಾಂಡಿ’ಯ ಸಿದ್ಧತೆಯಲ್ಲಿ ನಿರತರಾಗಿರುವ ನಟ ಧನುಷ್, ಜನವರಿ 2017 ರಿಂದ ‘ದ ಎಕ್ಸ್ಟ್ರಾಆರ್ಡಿನರಿ ಜರ್ನಿ ಆಫ್ ಎ ಫಕೀರ್ ವೂ ಗಾಟ್ ಟ್ರ್ಯಾಪ್ಡ್ ಇನ್ ಆನ್ ಇಕಿಯಾ ಕಪ್ಬೋರ್ಡ್’ ಹಾಲಿವುಡ್ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದು ಅವರ ಮೊದಲ ಹಾಲಿವುಡ್ ಸಿನೆಮಾ ಆಗಲಿದೆ.
“ಈ ಯೋಜನೆ ಇನ್ನೂ ಮುಂಚಿತವಾಗಿಯೇ ಪ್ರಾರಂಭವಾಗಬೇಕಿತ್ತು, ಆದರೆ ಕೆಲವು ಕಾರಣಗಳಿಂದ ಮುಂದೆ ಹೋಯಿತು. ಧನುಷ್ ಜನವರಿಯಿಂದ ಸಿನೆಮಾ ಸೆಟ್ ಸೇರಲಿದ್ದಾರೆ. ಈ ಮಧ್ಯೆ ಅವರು ‘ಪವರ್ ಪಾಂಡಿ’ ಸಿನೆಮಾದ ಚಿತ್ರೀಕರಣ ಮುಗಿಸಲಿದ್ದು, ವೆಟ್ರಿಮಾರನ್ ಅವರ ‘ವಡಾ ಚೆನೈ’ ಸಿನೆಮಾದ ಬಹುತೇಕ ಚಿತ್ರೀಕರಣವನ್ನು ಮುಗಿಸಲಿದ್ದಾರೆ” ಎಂದು ಈ ಬಳವಣಿಗೆಯನ್ನು ತಿಳಿದ ಮೂಲಗಳು ತಿಳಿಸಿವೆ.
ಜನಪ್ರಿಯ ಕಾದಂಬರಿಯನ್ನು ಆಧರಿಸಿ ಮಾಡುತ್ತಿರುವ ಈ ಸಿನೆಮಾವನ್ನು ಇರಾನಿ ನಿರ್ದೇಶಕ ಮಾರ್ಜಾನೆ ಸತ್ರಾಪಿ ನಿರ್ದೇಶಿಸಲಿದ್ದಾರೆ.
ಭಾರತ ಮೂಲದ ಪ್ಯಾರಿಸ್ ನಲ್ಲಿ ನೆಲೆಸಿರುವ ಮಾಂತ್ರಿಕನ ಅಜಾ ಪಾತ್ರವನ್ನು ಧನುಷ್ ನಿರ್ವಹಿಸಲಿದ್ದು, ಭಾರತ, ಪ್ಯಾರಿಸ್, ಮೊರ್ರಾಕೊ ಮತ್ತು ಇಟಲಿಯಲ್ಲಿ ಈ ಸಿನೆಮಾ ಚಿತ್ರೀಕರಣಗೊಳ್ಳಲಿದೆ.
ಈ ಸಿನೆಮಾದಲ್ಲಿ ಉಮಾ ಥುರ್ಮಾನ್ ಮತ್ತು ಅಲೆಕ್ಸಾಂಡ್ರಾ ದಡ್ಡಾರಿಯೋ ಕೂಡ ನಟಿಸಲಿದ್ದಾರೆ.

Comments are closed.