ಬೆಂಗಳೂರು: ಬೃಹನ್ ಮುಂಬೈ ನಗರ ಪಾಲಿಕೆ ಅಧಿಕಾರಿಗಳು (ಬಿಎಂಸಿ) ತಮಗೆ ₹5 ಲಕ್ಷ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದೇನಾ ಅಚ್ಚೇದಿನ್? ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿ ಕಾಮಿಡಿ ನೈಟ್ ಖ್ಯಾತಿಯ ಕಪಿಲ್ ಶರ್ಮಾ ಸೆಪ್ಟೆಂಬರ್ 9 ರಂದು ಟ್ವೀಟ್ ಮಾಡಿದ್ದರು.
ಕಪಿಲ್ ಶರ್ಮಾ ಮಾಡಿದ ಈ ಟ್ವೀಟ್ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಅಗತ್ಯ ಪೂರಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.
ಕಪಿಲ್ ಶರ್ಮಾ ಅವರು ಮಾಡಿರುವ ಆರೋಪದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವಂತೆ ಕೆಲವರು ಒತ್ತಾಯಿಸಿದ್ದರೆ, ಇನ್ನು ಕೆಲವರು ಶರ್ಮಾ ಮೋದಿ ವಿರುದ್ಧ ಮಾತಾಡಿದ್ದಕ್ಕೆ ಕಿಡಿ ಕಾರಿದ್ದರು. ಈ ನಡುವೆ ನಾನು ಭ್ರಷ್ಟಾಚಾರದ ವಿರುದ್ಧವಷ್ಟೇ ಮಾತನಾಡಿದ್ದೇನೆ. ಯಾವುದೇ ರಾಜಕೀಯ ಪಕ್ಷಗಳ ಬಗ್ಗೆ ಮಾತನಾಡಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಕಪಿಲ್ ರಾಜಕೀಯ ಜಗಳಗಳಿಂದ ಹಿಂದೆ ಸರಿದಿದ್ದರು.
I am paying 15 cr income tax from last 5 year n still i have to pay 5 lacs bribe to BMC office for making my office @narendramodi
— KAPIL (@KapilSharmaK9) September 9, 2016
Yeh hain aapke achhe din ? @narendramodi
— KAPIL (@KapilSharmaK9) September 9, 2016
I just voiced my concern on the corruption I faced with certain individuals..Its No blame on any political party be it BJP, MNS or ShivSena
— KAPIL (@KapilSharmaK9) September 9, 2016
ಟ್ವೀಟ್ ಪರ ವಿರುದ್ದ ಚರ್ಚೆಗಳು ನಡೆದ ನಂತರ ಇದೀಗ ಕಪಿಲ್ ಶರ್ಮಾ ಅವರಿಗೆ ಮೋದಿ ಯಾವ ರೀತಿ ಉತ್ತರ ನೀಡಿ ಬಾಯ್ಮುಚ್ಚಿಸಿದರು ಎಂಬ ಶೀರ್ಷಿಕೆಯ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದೆ. ಕಪಿಲ್ ಶರ್ಮಾ ಅವರಿಗೆ ಮೋದಿಯ ಉತ್ತರ ಎಂದು ಮೋದಿ ಬೆಂಬಲಿಗರು ಈ ವಿಡಿಯೊವನ್ನು ಶೇರ್ ಮಾಡುತ್ತಿದ್ದು, ಈ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
Comments are closed.